ಹನುಮಗಿರಿಯ ಪುನ:ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಕಂಚಿ ಕಾಮಕೋಟಿ ಪೀಠದ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಧರ್ಮ ಸಂದೇಶ ನೀಡಿದರು. ರಾವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು. 
ಉಡುಪಿ

ಜನರ ನಡುವೆ ನಿರ್ಮಾಣವಾಗಲಿ ಭಕ್ತಿಯ ಸೇತುವೆ

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಅಸುರ ಸಂಹಾರಕ್ಕಾಗಿ ಶ್ರೀರಾಮ ಭಾರತದಿಂದ ಶ್ರೀಲಂಕಕ್ಕೆ ಸೇತುವೆ ನಿರ್ವಾಣ ವಾಡಿದ್ದು, ವಾನರ ಸೇನೆಗೆ ಸೇವೆಯ ಅವಕಾಶ ಸಿಕ್ಕಿತು. ಹಾಗೆಯೇ ಒಳ್ಳೆಯ ಕೆಲಸಕ್ಕಾಗಿ ಜನರ ನಡುವೆ ಭಕ್ತಿಯ, ಸೇವೆಯ ಮತ್ತು ಜ್ಞಾನದ ಸೇತುವೆ ನಿರ್ವಾಣ ವಾಡುವ ಅಗತ್ಯವಿದೆ ಎಂದು ಕಂಚಿಪುರಂ ಮಠ ಸಂಸ್ಥಾನ ಕಂಚಿ ಕಾಮಕೋಟಿ ಪೀಠದ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಹನುಮಗಿರಿಯಲ್ಲಿ ಕೋದಂಡರಾಮ ಪಂಚಮುಖಿ ಆಂಜನೇಯ ದೇವರ ಪುನ:ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಧರ್ಮಸಂದೇಶ ನೀಡಿದರು.
ಧರ್ಮ ಸಂದೇಶ ನೀಡಿದ ರಾಮಚಂದ್ರಾಪುರ ಮಠದ ರಾವೇಶ್ವರ ಭಾರತೀ ಸ್ವಾಮೀಜಿ , ಧರ್ವಾಚರಣೆಯೊಂದಿಗೆ ಗುರು ಸೇವೆ, ಹಿರಿಯರ ಸೇವೆ, ದೇಶ ಸೇವೆ ವಾಡಬೇಕು. ದೇಶಕ್ಕೆ ಧರ್ಮ, ಸೇವಾ ಮನೋಭಾವ, ಐಕ್ಯ ಅದ್ವೈತ ಮನೋಭಾವ ಅಗತ್ಯವಿದೆ. ತಪ್ಪು ದಾರಿ ಹಿಡಿಯಬಾರದು, ತಪ್ಪು ಆಲೋಚನೆಗಳನ್ನು ವಾಡಬಾರದು. ರಾಮಕೃಷ್ಣರ ಸಂದೇಶಗಳು ಪಾಲನೆಯಾಗಬೇಕು ಎಂದರು.

ಧರ್ಮ ದಂಡ ಪ್ರದಾನ

ಬ್ರಹ್ಮಕಲಶೋತ್ಸವದ ನೇತೃತ್ವ ವಹಿಸಿದ್ದ ವಾಜಿ ಸಂಸದ ನಳಿನ್ ಕುವಾರ್ ಕಟೀಲು, ಸ್ವಾಗತ ಸಮಿತಿ ಅಧ್ಯಕ್ಷ ರವೀಶ್ ಪಡುಮಲೆ, ರಾಜ್ಯ ವಾನವ ಹಕ್ಕುಗಳ ಆಯೋಗದ ವಾಜಿ ಅಧ್ಯಕ್ಷ ಟಿ.ಶ್ಯಾಮ್ ಭಟ್, ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಅವರಿಗೆ ಕಂಚಿ ಶ್ರೀಗಳು ಪಂಚಮುಖಿ ಆಂಜನೇಯನ ಸನ್ನಿಧಿಯಲ್ಲಿ ‘ಧರ್ಮ ದಂಡ’ ನೀಡಿ ಧರ್ಮ ಕಾರ್ಯ ಮುಂದುವರಿಸುವಂತೆ ಹಾರೈಸಿದರು.

ದೇಶ ಮತ್ತು ಧರ್ಮಕ್ಕೆ ಅವಿನಾಭಾವ ಸಂಬಂಧವಿದ್ದು, ಜನರ ಸುಭಿಕ್ಷೆಗಾಗಿ ಕೃಷಿಕರು ಹಾಗೂ ದೇಶ ರಕ್ಷಣೆಗೆ ಸೈನಿಕರು ಬೇಕು. ಭೂಮಿ ಪಾವನವಾಗಬೇಕಾದರೆ ಯಾಗ ಹವನಗಳು ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಹನುಮಗಿರಿ ಯುವ ಪೀಳಿಗೆಗೆ ಪ್ರೇರಣೆ ನೀಡುವ ತಾಣವಾಗಿದೆ. ದುಷ್ಟ ಶಕ್ತಿಗಳ ದೂರ ವಾಡಲು ಹಾಗೂ ಶಿಷ್ಟರ ರಕ್ಷಣೆಗೆ ಯಜ್ಞಹವನಗಳ ಅಗತ್ಯವಿದ್ದು, ಇದರ ರಕ್ಷಣೆ ಜನರ ಕರ್ತವ್ಯವಾಗಿದೆ.