ವಲದೂರು ವೆಲ್ಫೇರ್​ ಅಸೋಸಿಯೇಶನ್​ ವಾರ್ಷಿಕೋತ್ಸವದಲ್ಲಿ ಸರಸ್ವತಿ ಭಂಡಾರಿ, ಹರಿಣಾ ಶೆಟ್ಟಿ, ವಿಶಾಲಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಗಣೇಶ್​ ಪೂಜಾರಿ, ಪುಂಡಲೀಕ ಮರಾಠೆ, ಅಶೋಕ್​ ಕುಮಾರ್​ ಮತ್ತಿತರರಿದ್ದರು. 
ಉಡುಪಿ

ಹಿರಿಯರಿಂದ ಸಾಮರಸ್ಯ, ಸಹಬಾಳ್ವೆ ಪಾಠ

ಪಡುಬಿದ್ರಿ: ತುಳುನಾಡು ಸಾಮರಸ್ಯದ ತವರೂರು. ನಮ್ಮ ಹಿರಿಯರು ಉನ್ನತ ನೈತಿಕ ಮೌಲ್ಯ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ನಾಗ, ದೈವ, ದೇವರಲ್ಲಿ ಭಯಭಕ್ತಿ, ನಂಬಿಕೆ, ಕುಟುಂಬದಲ್ಲಿ ಸಾಮರಸ್ಯ, ಸಹಬಾಳ್ವೆಯ ಪಾಠವನ್ನು ಕಲಿಸಿದ್ದಾರೆ. ತುಳುನಾಡು ದೈವ-ದೇವರ ಗರ್ಭಗುಡಿ, ಈ ಮಣ್ಣಿನಲ್ಲಿ ಹುಟ್ಟಿದ ನಾವು ಧನ್ಯರು ಎಂದು ಉದ್ಯಮಿ ವಲದೂರು ಪಡುಮನೆ ಗಣೇಶ್​ ಪೂಜಾರಿ ಹೇಳಿದರು.
ಪಾದೂರು ಗ್ರಾಮದ ವಲದೂರು ವೆಲ್ಫೇರ್​ ಅಸೋಸಿಯೇಶನ್​ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಅಶೋಕ್​ ಕುಮಾರ್​ ವಲದೂರು ಅಧ್ಯಕ್ಷತೆ ವಹಿಸಿದ್ದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷ ಶಾಂತಾರಾಜ ವೈ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ತುಳು ಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೆಮ್ತೂರು ದೊಡ್ಡಣ್ಣ ಶೆಟ್ಟಿ ನಾಟಕ ಪಂಥ ಸಂಚಾಲಕ ಬಿ.ಪ್ರಭಾಕರ ಭಂಡಾರಿ ಶುಭ ಹಾರೈಸಿದರು.
ವಿಶ್ವನಾಥ್​ ಪೂಜಾರಿ, ಗೋಪಾಲ ಪೂಜಾರಿ ಉಪಸ್ಥಿತರಿದ್ದರು. ಶುಭಲಕ್ಷ್ಮೀ ಶೆಟ್ಟಿ ಪ್ರಾರ್ಥಿಸಿದರು. ಉಪನ್ಯಾಸಕಿ ಸುನೀತಾ ನಿರೂಪಿಸಿದರು.
"

ಸಾಧಕರಿಗೆ ಸನ್ಮಾನಸರಸ್ವತಿ ಭಂಡಾರಿ, ಹರಿಣಾ ಎಂ.ಶೆಟ್ಟಿ, ವಿಶಾಲಾ ಶೆಟ್ಟಿ, ಮಧುಸೂದನ ಸಾಲ್ಯಾನ್​, ನಿತಿನ್​ ನಾಯಕ್​ ಪರವಾಗಿ ನಿತ್ಯಾನಂದ ನಾಯಕ್​ ಪಾಲಮೆ, ಲೀಲಾಧರ ಶೆಟ್ಟಿ ವಲದೂರು, ಪ್ರಸಾದ್​ ಶೆಟ್ಟಿ ವಲದೂರು, ಸುಕೇಶ್​ ಪೂಜಾರಿ ವಲದೂರು ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.