leopard 
ಉಡುಪಿ

ಎಣ್ಣೆಪ್ಪಾರದಲ್ಲಿ ಚಿರತೆ ಸಂಚಾರ

ಇಂದಿರಾ ಎನ್ ಕೆ
ಕಾಸರಗೋಡು: ಕೋಡೋಂ ಬೇಳೂರ್ ಪಂಚಾಯಿತಿ ಎಣ್ಣೆಪ್ಪಾರ ಮಲಯಾಟ್ಟುಕ್ಕರ ಪ್ರದೇಶದಲ್ಲಿ ಚಿರತೆ ಸಂಚಾರದ ಬಗ್ಗೆ ವದಂತಿ ಹಬ್ಬಿರುವ ಹಿನ್ನೆಲೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ.
ಮಂಗಳವಾರ ಚಿರತೆ ಸಂಚರಿಸುತ್ತಿದ್ದ ಬಗ್ಗೆ ನಾಗರಿಕರು ನೀಡಿದ ಮಾಹಿತಿಯನ್ವಯ ಪರುದೋಂ ಸೆಕ್ಷನ್ ಅರಣ್ಯಾಧಿಕಾರಿ ಎಚ್.ಆರ್.ಬಾಬು ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ. ಆದರೆ, ಚಿರತೆ ಸಂಚಾರದ ಯಾವುದೇ ಕುರುಹು ಕಂಡುಬಂದಿಲ್ಲ. ಆಸುಪಾಸಿನ ನಿವಾಸಿಗಳು ಜಾಗ್ರತೆ ವಹಿಸಲು ಅಧಿಕಾರಿಗಳು ತಿಳಿಸಿದ್ದಾರೆ.