ಬೆಳ್ತಂಗಡಿ: ಸವಣಾಲು ಗ್ರಾಮದ ಹನ್ಯಾಡಿ ಪಲ್ಕೆಯಲ್ಲಿ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಇಲ್ಲಿನ ನಿವಾಸಿ ಬಾಲಕೃಷ್ಣ ನಾಯ್ಕ ಅವರ ಮನೆ ಅಂಗಳದಲ್ಲಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟಿದ್ದರು, ಮಂಗಳವಾರ ಬೆಳಗ್ಗೆ ಚಿರತೆಯೊಂದು ಬೋನಿಗೆ ಬಿದ್ದಿದ್ದು, ಚಿರತೆಯನ್ನು ಸ್ಥಳಾಂತರಿಸಲಾಯಿತು.
ಹೈವೋಲ್ಟೇಜ್‌ನಿಂದ ಲಕ್ಷಾಂತರ ರೂ. ಹಾನಿ
ಉಪ್ಪಿನಂಗಡಿ: ಹೈವೋಲ್ಟೇಜ್ ವಿದ್ಯುತ್ ಹರಿದು ಬಂದ ಪರಿಣಾಮ 34 ನೆಕ್ಕಿಲಾಡಿಯ ಎಸ್.ಎಂ.ಮೊಹಮ್ಮದ್ ರಫೀಕ್ ಎಂಬುವರಿಗೆ ಸೇರಿದ ಪಾಪ್ಯುಲರ್ ಪ್ಲಾಸ್ಟಿಕ್ ಇಂಡಸ್ಟ್ರಿಯ ಯಂತ್ರೋಪಕರಣಗಳು ಹಾಗೂ ಮನೆಯ ವಿದ್ಯುತ್ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದ್ದು, ಸುವಾರು ಎಂಟು ಲಕ್ಷ ರೂ.ಗೂ ಅಧಿಕ ನಷ್ಟವುಂಟಾದ ಟನೆ ನಡೆದಿದೆ. ವಿದ್ಯುತ್ ಸರಬರಾಜಿನಲ್ಲಾದ ಲೋಪದಿಂದಾದ ನಷ್ಟಕ್ಕೆ ಮೆಸ್ಕಾಂ ಸೂಕ್ತ ಪರಿಹಾರ ನೀಡಬೇಕೆಂದು ಎಸ್.ಎಂ.ಮೊಹಮ್ಮದ್ ರಫೀಕ್ ಆಗ್ರಹಿಸಿದ್ದಾರೆ.
ನೆಲ್ಯಾಡಿ, ಶಿರಾಡಿ ಗ್ರಾಪಂ ಮೇಲೆ ಲೋಕಾ ದಾಳಿ
ಕಡಬ: ತಾಲೂಕಿನ ನೆಲ್ಯಾಡಿ, ಶಿರಾಡಿ ಹಾಗೂ ಮರ್ದಾಳ ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುದಾನ ಬಳಕೆ, ನರೇಗಾ ಕಾಮಗಾರಿಗಳ ಬಿಲ್ ಪಾವತಿ, ಸಾರ್ವಜನಿಕ ಅರ್ಜಿಗಳ ವಿಲೇವಾರಿ, ಕಟ್ಟಡ ನಿರ್ವಾಣ ಪರವಾನಗಿ, ಖಾತಾ ಬದಲಾವಣೆ ಹಾಗೂ ಕಚೇರಿ ಹಾಜರಾತಿ ಪುಸ್ತಕಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತರ ತಂಡ ಗ್ರಾಮ ಪಂಚಾಯಿತಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್ ಮತ್ತು ಸಿಬ್ಬಂದಿಗಳಾದ ನಾಗರಾಜ್, ಪ್ರಸನ್ನ, ಸುದೀಪ್, ಜಲಾಲ್ ನೇತೃತ್ವದ ತಂಡ ನೆಲ್ಯಾಡಿ ಗ್ರಾಮ ಪಂಚಾಯಿತಿಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.