ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಉರುವಾಲು ಗ್ರಾಮದ ಕೊರಿಂಜ ಪೊಯ್ಯ ಪರಿಸರದಲ್ಲಿ ಚಿರತೆ ಕರುವಿನ ಮೇಲೆ ದಾಳಿ ಮಾಡಿ ಕೊಂದಿರುವ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಜಲಜಾಕ್ಷಿ ಎಂಬುವರಿಗೆ ಸೇರಿದ ಕರು ಚಿರತೆ ದಾಳಿಗೆ ಮೃತಪಟ್ಟಿದೆ.
ಪರಿಸರದ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಓಡಾಡಲು ಆತಂಕ ಪಡುತ್ತಿದ್ದಾರೆ. ಚಿರತೆಗೆ ಸೆರೆಗೆ ಅರಣ್ಯ ಅಧಿಕಾರಿಗಳು ಬೋನು ಅಳವಡಿಸಿದ್ದಾರೆ.