ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಯೋಜಿಸಿದ್ದ 'ಕುವೆಂಪು ಸಾಹಿತ್ಯ ದರ್ಶನ' ಕಾರ್ಯಕ್ರಮದಲ್ಲಿ ಡಾ. ಅರುಣ್ ಎಸ್.ಆರ್. ಮಾತನಾಡಿದರು. ಡಾ. ರಾಜಶೇಖರ್ ಹಳೇಮನೆ, ಡಾ. ಮಂಜುನಾಥ್ ಕರಬ, ಡಾ. ನಾಗರಾಜ್ ಜಿ.ಪಿ., ಡಾ. ಶಿವಕುಮಾರ್ ಅಳಗೋಡು ಇದ್ದರು.
* ಡಾ. ಅರುಣ್ ಎಸ್.ಆರ್. ಅಭಿಪ್ರಾಯ
* ಪಿಪಿಸಿಯಲ್ಲಿ ವಿಶೇಷ ಉಪನ್ಯಾಸ
ಉಡುಪಿ: ವಿಶ್ವಮಾನವ ಸಂದೇಶವನ್ನು ಸಾರಿದ ನಾಡಿನ ಶ್ರೇಷ್ಠ ಕವಿ ಕುವೆಂಪು. ಪ್ರಕೃತಿಪ್ರಿಯರಾಗಿದ್ದ ಅವರು ಜಾತಿ, ಧರ್ಮ, ಮತ, ಪಂಥಗಳ ಎಲ್ಲೆ ಮೀರಿದ 'ಅನಿಕೇತನ ತತ್ವ' ಬೋಧಿಸಿ ಅಂತೆಯೇ ಬದುಕಿ ತೋರಿಸಿದವರು. ರಸಋಷಿಯ ಸಮಗ್ರ ಸಾಹಿತ್ಯದ ಓದು ಯುವಜನತೆಯನ್ನು ಪ್ರಬುದ್ಧಗೊಳಿಸಿ ಸುಸಂಸತರನ್ನಾಗಿ ಮಾಡುತ್ತದೆ ಎಂದು ಆರ್ಆರ್ಸಿಯ ಸಹಸಂಶೋಧಕ ಡಾ. ಅರುಣ್ ಎಸ್.ಆರ್. ಅಭಿಪ್ರಾಯಪಟ್ಟರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜ್(ಸ್ವಾಯತ್ತ)ನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ.) ಕುಪ್ಪಳಿ ಆಶ್ರಯದಲ್ಲಿ 'ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ' ಶೀರ್ಷಿಕೆಯಡಿ ಮಂಗಳವಾರ (ಆ.4) ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಕರಬ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರತ್ಯಾ ಶೆಟ್ಟಿ ಮತ್ತು ತಂಡದವರು ಕುವೆಂಪು ವಿರಚಿತ 'ಬಾರಿಸು ಕನ್ನಡ ಡಿಂಡಿಮವ' ಕವನವನ್ನು ಪ್ರಾರ್ಥನಾ ಗೀತೆಯಾಗಿ ಹಾಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ್ ಜಿ.ಪಿ. ಸ್ವಾಗತಿಸಿದರು. ಡಾ. ಸತೀಶ್ ವಂದಿಸಿದರು. ಕಾರ್ಯಕ್ರಮದ ಸ್ಥಳಿಯ ಸಂಯೋಜಕ ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಅಳಗೋಡು ನಿರೂಪಿಸಿದರು.
ಕುಪ್ಪಳಿಯ ಸುತ್ತ ಸುಮಾರು ಮೂರೂವರೆ ಸಾವಿರ ಎಕರೆಯಷ್ಟು ಪ್ರದೇಶವನ್ನು ಕುವೆಂಪು ಅರಣ್ಯ ಎಂದು ಸರ್ಕಾರ ಘೋಷಿಸಿ ಪ್ರಕೃತಿಯ ಉಳಿವಿಗೆ ಮೀಸಲಿರಿಸಿದೆ. ಕುವೆಂಪು ಸಾಹಿತ್ಯವು ಮಾನವೀಯ ಮೌಲ್ಯ ವಿಕಾಸಗೊಳಿಸುವಂಥದ್ದು. ಅವರ ಕೃತಿಗಳು ನಿತ್ಯನೂತನ.
— ಡಾ. ರಾಜಶೇಖರ್ ಹಳೇಮನೆ. ಉಜಿರೆ ಎಸ್ಡಿಎಂ ಕಾಲೇಜಿನ ಸಹಪ್ರಾಧ್ಯಾಪಕ.