ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ 'ಸಂವಿಧಾನ ಅಂದು-ಇಂದು' ವಿಷಯ ಕುರಿತು ಉಪನ್ಯಾಸ ನೀಡಿದ ರೋಹಿತ್​ ಚಕ್ರತೀರ್ಥ ಅವರನ್ನು ಗೌರವಿಸಲಾಯಿತು. ವಿ.ಗೋಪಾಲ್​ ಜೋಯಿಸ, ಪ್ರೊ. ಡಿ.ಎಸ್​. ಅಮೃತೇಶ ಆಚಾರ್ಯ, ವಿ. ಹೆರ್ಗ ಹರಿಪ್ರಸಾದ ಭಟ್​ ಇದ್ದರು. 
ಉಡುಪಿ

'ಸಂವಿಧಾನ ಅಂದು-ಇಂದು' ವಿಶೇಷ ಉಪನ್ಯಾಸ

* ರೋಹಿತ್​ ಚಕ್ರತೀರ್ಥ ಉಪಸ್ಥಿತಿ

ಉಡುಪಿ: ಉಡುಪಿಯ ಶ್ರೀಮನ್​ ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ 'ಸಂವಿಧಾನ ಅಂದು-ಇಂದು' ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. 
ಖ್ಯಾತ ಅಂಕಣಕಾರ ರೋಹಿತ್​ ಚಕ್ರತೀರ್ಥ ಉಪನ್ಯಾಸ ನೀಡಿ, ಪ್ರಾಚೀನ ಕಾಲದಲ್ಲಿ ಇದ್ದಂತಹ ಶಾಸ್ತ್ರೀಯ ಸಂವಿಧಾನದ ಜತೆಗೆ ಅರ್ವಾಚೀನ ಸಂವಿಧಾನದ ವಿಚಾರಗಳನ್ನು ತಿಳಿಸಿದರು.

ಎಸ್​ಎಂಎಸ್​ಪಿ ಸಭೆಯ ಕಾರ್ಯದರ್ಶಿ ವಿ.ಗೋಪಾಲ್​ ಜೋಯಿಸ, ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಡಿ.ಎಸ್​. ಅಮೃತೇಶ ಆಚಾರ್ಯ ಉಪಸ್ಥಿತರಿದ್ದರು.

ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ವಿ. ಹೆರ್ಗ ಹರಿಪ್ರಸಾದ ಭಟ್​ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಡಾ. ರಾಧಾಕೃಷ್ಣ ಬಿ. ವಂದಿಸಿದರು.