ಉಡುಪಿಯ ತೆಂಕನಿಡಿಯೂರು ಕಾಲೇಜಿನಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಉಪನ್ಯಾಸ ಏರ್ಪಡಿಸಲಾಗಿತ್ತು. ಪ್ರೊ. ನಿತ್ಯಾನಂದ್​ ವಿ. ಗಾಂವ್ಕರ್​, ಬಾಲರಾಜ್​ ಡಿ.ಬಿ., ಪ್ರೊ. ಬಿಂದು ಟಿ., ಮರ್ವಿನ್​ ಡಿಸೋಜಾ, ಸ್ಮಿತಾ, ನಾಗಲಕ್ಷ್ಮೀ, ಡಾ. ದತ್ತ ಕುಮಾರ್​ ಹಾಗೂ ವಿದ್ಯಾರ್ಥಿಗಳು ಇದ್ದರು. 
ಉಡುಪಿ

ಶಿಕ್ಷಣದ ಸದುಪಯೋಗದಿಂದ ಯಶಸ್ಸು ಸಾಧ್ಯ

* ಪ್ರೊ. ನಿತ್ಯಾನಂದ್​ ವಿ. ಗಾಂವ್ಕರ್​ ಅಭಿಪ್ರಾಯ

* ಸಂಶೋಧನಾ ವಿಷಯ ಆಯ್ಕೆಗಾಗಿ ಉಪನ್ಯಾಸ

ಉಡುಪಿ: ಸಂಶೋಧನಾಸಕ್ತ ವಿದ್ಯಾರ್ಥಿಗಳಿಗೆ ಕಾಲೇಜ್​ ವತಿಯಿಂದ ಕಾಲಕಾಲಕ್ಕೆ ಸೂಕ್ತ ತಜ್ಞರಿಂದ ಉಪನ್ಯಾಸ, ಮಾಹಿತಿಗಳನ್ನು ಒದಗಿಸಲಾಗುತ್ತದೆ. ವಿದ್ಯಾರ್ಥಿಗಳು ಈ ಶಿಕ್ಷಣದ ಸದುಪಯೋಗ ಮಾಡಿಕೊಂಡಲ್ಲಿ ಸಂಶೋಧನಾ ಕಾರ್ಯದಲ್ಲಿ ಯಶಸ್ಸು ಪಡೆಯಬಹುದು. ತನ್ಮೂಲಕ ಉತ್ತಮ ಜೀವನವನ್ನೂ ರೂಪಿಸಿಕೊಳ್ಳಬಹುದು ಎಂದು ಪ್ರಾಂಶುಪಾಲ ಪ್ರೊ. ನಿತ್ಯಾನಂದ್​ ವಿ. ಗಾಂವ್ಕರ್​ ಅಭಿಪ್ರಾಯ ವ್ಯಕ್ತಪಡಿಸಿದರು.
ಉಡುಪಿಯ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಾಣಿಜ್ಯ ಸ್ನಾತಕೋತ್ತರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಆಶ್ರಯದಲ್ಲಿ ಆಯೋಜಿಸಿದ್ದ 'ಸಂಶೋಧನಾ ಕಲ್ಪನೆಯಿಂದ ಸಂಶೋಧನಾ ವಿಷಯದವರೆಗೆ ಪರಿಣಾಮಕಾರಿ ವಿಷಯ ಆಯ್ಕೆಯ ತಂತ್ರಗಳು' ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾಲರಾಜ್​ ಡಿ.ಬಿ. ಮಾತನಾಡಿ, ಸಂಶೋಧನಾ ವಿಷಯ ಆಯ್ಕೆ ಮಾಡುವಲ್ಲಿ ಅನುಸರಿಸಬೇಕಾದ ವಿಧಾನ, ಉತ್ತಮ ಸಂಶೋಧನಾ ವಿಷಯದ ಲಕ್ಷಣ, ಸಾಹಿತ್ಯ ಸಮೀಕ್ಷೆಯ ಮಹತ್ವ ಹಾಗೂ ಸಂಶೋಧನಾ ಕ್ಷೇತ್ರದಲ್ಲಿನ ಹೊಸ ಅವಕಾಶಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಬಿಂದು ಟಿ., ಸಹಾಯಕ ಪ್ರಾಧ್ಯಾಪಕ ಮರ್ವಿನ್​ ಡಿಸೋಜಾ, ಉಪನ್ಯಾಸಕರಾದ ಸ್ಮಿತಾ, ನಾಗಲಕ್ಷ್ಮೀ ಉಪಸ್ಥಿತರಿದ್ದರು.
ಪ್ರಥಮ ಎಂಕಾಂ ವಿದ್ಯಾರ್ಥಿನಿ ಸ್ನೇಹಾ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಜ್ವಲ್​ ಸ್ವಾಗತಿಸಿದರು. ಪ್ರತೀಕ್ಷಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಪೂಜಾ ವಂದಿಸಿದರು. ಅವಿನಾಶ್​ ಕಾರ್ಯಕ್ರಮ ನಿರೂಪಿಸಿದರು. ಎಂ.ಕಾಂ. ಸಂಯೋಜಕ ಡಾ. ದತ್ತ ಕುಮಾರ್​ ಸಂಘಟಿಸಿದರು.