ಹಿರೆಬಂಡಾಡಿ ಗ್ರಾಮದ ನಂದಿನಿ ನಗರದಿಂದ ಹರಿನಗರ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ ನಡೆಯಿತು. ಮಾಜಿ ಶಾಸಕ ಸಂಜೀವ ಮಟಂದೂರು, ಸುನೀಲ್ ಕುಮಾರ್ ದಡ್ಡು ಮೊದಲಾದವರಿದ್ದರು. 
ಉಡುಪಿ

ಹಿರೆಬಂಡಾಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ

ಉಪ್ಪಿನಂಗಡಿ: ರಾಜಕೀಯ ಜಿದ್ದಾಜಿದ್ದಿನಿಂದ ಸತತವಾಗಿ ಕಡೆಗಣಿಸಲ್ಪಟ್ಟಿದ್ದ ಹಿರೆಬಂಡಾಡಿ ಗ್ರಾಮದ ನಂದಿನಿ ನಗರದಿಂದ ಹರಿನಗರ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣಕ್ಕೆ ಸಂಸದರು ನೀಡಿದ 5 ಲಕ್ಷ ರೂ. ಅನುದಾನದ ಕಾಮಗಾರಿಗೆ ಮಾಜಿ ಶಾಸಕ ಸಂಜೀವ ಮಟಂದೂರು ಬುಧವಾರ ಶಿಲಾನ್ಯಾಸ ಮಾಡಿದರು.
ರಸ್ತೆ ನಾದುರಸ್ತಿಯಿಂದಾಗಿ ಹಲವಾರು ಅಪಘಾತ ಸಂಭವಿಸಿ ಜನರು ನಿರಂತರ ಗಾಯಗೊಳ್ಳುತ್ತಿದ್ದರೂ ಜನಪ್ರತಿನಿಧಿಗಳು ಈ ರಸ್ತೆಯ ಅಭಿವೃದ್ಧಿಗೆ ಗಮನ ಹರಿಸದ ಕಾರಣ ಸ್ಥಳೀಯರು ಚುನಾವಣಾ ಬಹಿಷ್ಕಾರದಂತಹ ಬೆದರಿಕೆಯೊಡ್ಡುವಷ್ಟರ ಮಟ್ಟಿಗೆ ಆಕ್ರೋಶಗೊಂಡಿದ್ದರು. ಸ್ಥಳೀಯರ ನ್ಯಾಯೋಚಿತ ಬೇಡಿಕೆಗೆ ತುರ್ತು ಸ್ಪಂದನೆ ನೀಡಿದ ಸಂಸದ ಬ್ರಿಜೇಶ್ ಚೌಟ, 5 ಲಕ್ಷ ರೂ. ಅನುದಾನ ಒದಗಿಸಿ ರಸ್ತೆ ದುರಸ್ತಿಗೆ ಅವಕಾಶ ಕಲ್ಪಿಸಿದ್ದಾರೆ.
ಬಿಜೆಪಿ ಮುಂದಾಳುಗಳಾದ ಸುನೀಲ್ ಕುಮಾರ್ ದಡ್ಡು, ಸುರೇಶ್ ಅತ್ರಮಜಲು, ಉಮೇಶ್ ಶೆಣೈ, ಪ್ರಸನ್ನ ದರ್ಬೆ, ನಿತಿನ್ ತಾರಿತ್ತಡಿ, ಸದಾನಂದ ಶೆಟ್ಟಿ, ದಯಾನಂದ ಸರೋಳಿ, ಪ್ರಸಾದ್ ಭಂಡಾರಿ, ಚಂದ್ರಶೇಖರ್ ಮಡಿವಾಳ, ಸ್ಥಳೀಯರಾದ ಲಕ್ಷ್ಮಣ್ ಗೌಡ, ಕೃಷ್ಣಪ್ಪ ನೆಕ್ಕರೆ, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ ಪುಲಮೊಗೆರು, ಹರಿಶ್ಚಂದ್ರ ನಂದಿನಿನಗರ, ಶಿವ ಹರಿನಗರ, ಮಂಜುನಾಥ್ ಹರಿನಗರ, ಜನಾರ್ದನ್ ಹರಿನಗರ, ಚಂದ್ರಾವತಿ, ಲಕ್ಷ್ಮೀಶ ನಿಡ್ಡೆಂಕಿ ಮೊದಲಾದವರು ಭಾಗವಹಿಸಿದ್ದರು.