Arrest 
ಉಡುಪಿ

ಲ್ಯಾಪ್‌ಟಾಪ್ ಕಳವು ಆರೋಪಿ ಸೆರೆ

ಕಾಸರಗೋಡು: ರೈಲಿನಲ್ಲಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯ ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಕಳವು ವಾಡಿದ ಪ್ರಕರಣದ ಆರೋಪಿ ಸುಧಾಕರನ್ (56) ಎಂಬಾತನನ್ನು ಆರ್‌ಪಿಎಫ್ ಮತ್ತು ರೈಲ್ವೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

ಫರೋಕ್‌ನಿಂದ ಕಾಸರಗೋಡಿಗೆ ಏರ್ನಾಡ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಯಾರು ಬಳ್ಕೂರು ನಿವಾಸಿ ಇಬ್ರಾಹಿಂ ಇಹ್ಸಾನ್ ಎಂಬುವರ 80,000 ರೂ. ಮೌಲ್ಯದ ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಕಳವಾಗಿತ್ತು.

ಬುಧವಾರ ಮಧ್ಯಾಹ್ನ 2.30ರ ವೇಳೆಗೆ ರೈಲು ಕಣ್ಣೂರು ನಿಲ್ದಾಣ ತಲುಪಿದಾಗ ಬ್ಯಾಗ್ ಕಳವಾಗಿರುವುದು ಅರಿವಿಗೆ ಬಂದಿದೆ. ರೈಲ್ವೆ ಪೊಲೀಸರು ಮತ್ತು ಆರ್‌ಪಿಎಫ್ ಜಂಟಿ ಕಾರ್ಯಾಚರಣೆ ನಡೆಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ಲ್ಯಾಪ್‌ಟಾಪ್ ವಶಕ್ಕೆ ಪಡೆದಿದ್ದಾರೆ.