LAPTOP 
ಉಡುಪಿ

ರೈಲಿನಲ್ಲಿ ಲ್ಯಾಪ್‌ಟಾಪ್ ಕಳವು

ಇಂದಿರಾ ಎನ್ ಕೆ

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಯಾರು ಬಳಿಯ ನಿವಾಸಿಯ ಲ್ಯಾಪ್‌ಟಾಪ್ ಕಳವಾಗಿರುವ ಬಗ್ಗೆ ಕಾಸರಗೋಡು ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಬಾಯಾರು ಬಳ್ಕೂರು ನಿವಾಸಿ ಇಬ್ರಾಹಿಂ ಇಹ್ಸಾನ್ ಬುಧವಾರ ಏರನಾಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸುಮಾರು 80 ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಕಳವಾಗಿದೆ. ಕಣ್ಣೂರು ರೈಲ್ವೆ ನಿಲ್ದಾಣಕ್ಕೆ ಬಂದಾಗ ಬ್ಯಾಗ್ ಕಳವಾಗಿರುವುದು ತಿಳಿದು ಪೊಲೀರಿಗೆ ದೂರು ನೀಡಿದ್ದಾರೆ.