ಉಡುಪಿಯ ಡಾ. ಜಿ.ಶಂಕರ್​ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ 'ಲಕ್ಷ್ಯ' ಕಾರ್ಯಕ್ರಮವನ್ನು ರೋವೆನಾ ಫೆರ್ನಾಂಡಿಸ್​ ಉದ್ಘಾಟಿಸಿದರು. ಮಲ್ಲಿಕಾ, ಪ್ರೊ. ಸೋಜನ್​ ಕೆ.ಜಿ., ಕೃಷ್ಣ ಭಟ್​, ಪ್ರೊ. ನಿಕೇತನಾ, ಪ್ರೊ. ಶ್ರೀಮತಿ ಅಡಿಗ, ಡಾ. ವಾರಿಜಾ ಇತರರಿದ್ದರು. 
ಉಡುಪಿ

ಗುರಿಯೊಂದಿಗೆ ಆಸಕ್ತಿ, ಧೈರ್ಯವೂ ಮುಖ್ಯ

ಉದ್ಯಮಿ ರೋವೆನಾ ಫೆರ್ನಾಂಡಿಸ್​ ಅಭಿಪ್ರಾಯ

* ಮಹಿಳಾ ಕಾಲೇಜ್​ನಲ್ಲಿ ಲಕ್ಷ್ಯ' ನಿರ್ವಹಣಾ ಹಬ್ಬ

ಉಡುಪಿ: ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿರಬೇಕು. ಅದರೊಟ್ಟಿಗೆ ಆಸಕ್ತಿ, ಶ್ರದ್ಧೆ, ಧೈರ್ಯ ಮತ್ತು ಸೃಜನಶೀಲ ಭಾವವೂ ಇರಬೇಕು. ಸತತ ಪ್ರಯತ್ನವೂ ಸಹ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ ಎಂದು ಮಹಿಳಾ ಉದ್ಯಮಿ ಮತ್ತು ಫುಡ್​ ಬ್ಲಾಗರ್​ ಆದ ರೋವೆನಾ ಫೆರ್ನಾಂಡಿಸ್​ ಅಭಿಪ್ರಾಯಪಟ್ಟರು.
ಉಡುಪಿಯ ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ. ಸಭಾಂಗಣದಲ್ಲಿ ವಾಣಿಜ್ಯಶಾಸ್ತ್ರ, ನಿರ್ವಹಣಾ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಾಸಕೋಶದ ವತಿಯಿಂದ ಹಮ್ಮಿಕೊಂಡಿದ್ದ ನಿರ್ವಹಣಾ ಹಬ್ಬ 'ಲಕ್ಷ್ಯ-2026' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜ್​ನ ಪ್ರಾಂಶುಪಾಲ ಪ್ರೊ. ಸೋಜನ್​ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೃಷ್ಣ ಭಟ್​, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನಾ, ಐಕ್ಯುಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ ಉಪಸ್ಥಿತರಿದ್ದರು.
ಕಾಲೇಜಿನ ವಾಣಿಜ್ಯಶಾಸ್ತ್ರ ಪಿ.ಜಿ. ವಿಭಾಗದ ಸಂಯೋಜಕಿ ಡಾ. ವಾರಿಜಾ ಸ್ವಾಗತಿಸಿದರು. ವಿಭಾಗದ ಸಹಾಯಕ ಪ್ರಧ್ಯಾಪಕ ಡಾ. ಅಬ್ದುಲ್​ ರಜಾಕ್​ ವಂದಿಸಿದರು. 'ಲಕ್ಷ್ಯ' ಕಾರ್ಯಕ್ರಮದ ನಿಮಿತ್ತ ಕಾಲೇಜ್​ನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ವಿವಿಧ ಅಂಗಡಿ, ಸ್ಟಾಲ್​ಗಳು ಗಮನ ಸೆಳೆದವು.
"

ಎಲ್ಲ ಕ್ಷೇತ್ರಗಳಲ್ಲೂ ಇಂದು ಮಹಿಳೆ ಸಾಧನೆ ತೋರುತ್ತಿದ್ದಾಳೆ. ಉದ್ಯಮ ಕ್ಷೇತ್ರದಲ್ಲಿ ಮಹಿಳೆಗೆ ಉತ್ತಮ ಅವಕಾಶಗಳಿವೆ. ತಮಗೆ ಆಸಕ್ತಿಯಿರುವ ಕ್ಷೇತ್ರ ಆಯ್ದುಕೊಂಡು, ಶ್ರಮಪಟ್ಟು ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಲಭಿಸಲು ಸಾಧ್ಯ.