ಕುಂದಾಪುರ ವಿದ್ಯಾರಂಗ ಮಿತ್ರ ಮಂಡಳಿಯ 56ನೇ ವಾರ್ಷಿಕೋತ್ಸವ ಸಮಾರಂಭ ಮತ್ತು 47ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಖಾರ್ವಿಕೇರಿ ವಿದ್ಯಾರಂಗ ವೇದಿಕೆಯಲ್ಲಿ ನಡೆಯಿತು. ದಾಮೋದರ ಖಾರ್ವಿ, ರವಿ ಕುಮಾರ್ ಗಂಗೊಳ್ಳಿ, ನಾಗರಾಜ ಶೆಟ್ಟಿ ಇತರರು ಇದ್ದರು. 
ಉಡುಪಿ

ಕುಂದಾಪುರ ವಿದ್ಯಾರಂಗ ಮಿತ್ರ ಮಂಡಳಿ ವಾರ್ಷಿಕೋತ್ಸವ

ಕುಂದಾಪುರ: ಕುಂದಾಪುರ ವಿದ್ಯಾರಂಗ ಮಿತ್ರ ಮಂಡಳಿಯ 56ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ಅಂಗ ಸಂಸ್ಥೆ ವಿದ್ಯಾನಿಧಿ ಯೋಜನೆಯ 47ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಖಾರ್ವಿಕೇರಿ ವಿದ್ಯಾರಂಗ ವೇದಿಕೆಯಲ್ಲಿ ನಡೆಯಿತು.
ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ದಾಮೋದರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ರವಿ ಕುಮಾರ್ ಗಂಗೊಳ್ಳಿ, ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ ಶೆಟ್ಟಿ, ಸರ್ಕಾರಿ ಆಯುರ್ವೇದ ಕಾಲೇಜು ವೈದ್ಯಾಧಿಕಾರಿ ಡಾ.ನಾಗರಾಜ್ ಕೌಲಗಿ, ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಉಮೇಶ ಶೆಟ್ಟಿ, ರವೀನಾ ಖಾರ್ವಿ ಮತ್ತು ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಅಜಂತ ಖಾರ್ವಿ, ಪ್ರಶಾಂತ ಮುರ್ಡೇಶ್ವರ ಉಪಸ್ಥಿತರಿದ್ದರು.
ಕ್ಯಾಪ್ಟನ್ ಲತಿಕಾ ಪ್ರಭಾಕರ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ರಿಶಾಂತ್ ಡಿ.ಖಾರ್ವಿ, ಅವನೀಶ ಎಸ್.ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸಾಯಿಸ್ಪರ್ಶ ಅವರನ್ನು ಸನ್ಮಾನಿಸಲಾಯಿತು. ವಿದ್ಯಾನಿಧಿ ಯೋಜನೆಯ 47ನೇ ವರ್ಷದ 3.10 ಲಕ್ಷ ರೂ. ವಿದ್ಯಾರ್ಥಿವೇತನವನ್ನು 141 ಮಂದಿಗೆ ವಿತರಿಸಲಾಯಿತು.
ವಿದ್ಯಾನಿಧಿ ಯೋಜನೆ ಅಧ್ಯಕ್ಷ ದಿನಕರ ಖಾರ್ವಿ ಸ್ವಾಗತಿಸಿದರು. ಶಶಿಕಲಾ ಮೋಹನ್ ಖಾರ್ವಿ ವರದಿ ವಾಚಿಸಿದರು. ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಪಟ್ಟಿಯನ್ನು ವಿದ್ಯಾನಿಧಿ ಯೋಜನೆಯ ಕೋಶಾಧಿಕಾರಿ ಮೋಹನ್ ಖಾರ್ವಿ ಮತ್ತು ಆಶಾ ಖಾರ್ವಿ ವಾಚಿಸಿದರು. ಅರುಣ್ ಖಾರ್ವಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ ಖಾರ್ವಿ ನಿರೂಪಿಸಿದರು. ವಿದ್ಯಾರಂಗ ಮಿತ್ರ ಮಂಡಳಿ ಕೋಶಾಧಿಕಾರಿ ಸತೀಶ್ ಎಸ್.ಖಾರ್ವಿ ವಂದಿಸಿದರು.