ಕುಂಬ್ಡಾಜೆ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಸ್ವಯಂ ಸೇವಕರಿಗೆ ತರಗತಿ ನಡೆಯಿತು. ಪ್ರಮುಖರಾದ ಯಶೋದಾ ಎನ್, ಪ್ರಿಯಾಂಕಾ ಎ.ಸಿ., ರವೀಂದ್ರ ರೈ ಇತರರಿದ್ದರು.  
ಉಡುಪಿ

ಕುಂಬ್ಡಾಜೆ ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನ

ಬದಿಯಡ್ಕ: ಸಾರ್ವಜನಿಕ ಆರೋಗ್ಯ ಚಟುವಟಿಕೆಗಳ ಅನುಷ್ಠಾನಕ್ಕೆ ಆರಂಭಿಸಿದ ವಿಷನ್ 2026 ಕಾರ್ಯಕ್ರಮದ ಯಶಸ್ವಿಗೆ ಮತ್ತು ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟುವಿಕೆಗೆ ನೀಡುವ ಎಚ್‌ಪಿಎ ಲಸಿಕೆಯ ಶೇ.100 ವ್ಯಾಪ್ತಿ ಪೂರೈಸಿದ್ದಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.
ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಕೆಲಸ ವಾಡಲು ಸಿದ್ಧರಾದ 140 ಆರೋಗ್ಯ ಸ್ವಯಂಸೇವಕರಿಗೆ ತರಬೇತಿ ನೀಡಲಾಯಿತು. ಕುಂಬ್ಡಾಜೆ ಪಂಚಾಯಿತಿ ಅಧ್ಯಕ್ಷೆ ಯಶೋದಾ ಎನ್. ಉದ್ಘಾಟಿಸಿದರು. ಕುಂಬ್ಡಾಜೆ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕಾ ಎ.ಸಿ. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಅತಿಥಿಯಾಗಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಭಾಗವಹಿಸಿದರು. ಆರೋಗ್ಯ ನಿರೀಕ್ಷಕ ಕೆ.ಸುರೇಶ್ ಕುವಾರ್ ಮತ್ತು ಪಬ್ಲಿಕ್ ಹೆಲ್ತ್ ನರ್ಸ್ ಉಷಾ ಅವರು ಆರೋಗ್ಯ ಸ್ವಯಂಸೇವಕರಿಗೆ ತರಬೇತಿ ನೀಡಿದರು.
ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನಾ ಕುವಾರಿ, ಅಬೂಬಕರ್, ಮಹೇಶ್ ಅಜ್ಜಿಮೂಲೆ, ಬಿ.ಟಿ. ಅಬ್ದುಲ್ಲಕುಂಞ್ಞೆ, ಎಸ್.ಮಹಮ್ಮದ್. ನೂರುದ್ದೀನ್, ಗೀತಾ, ಬಬಿತಾ ರೇಷ್ಮಾ, ಸೌಭಾಗ್ಯಲಕ್ಷ್ಮೀ ಮತ್ತು ಮಶೀದಾ ಭಾಗವಹಿಸಿದರು. ಡಾ.ಸೈಯದ್ ಹಮೀದ್ ಶುಹೈಬ್ ಸ್ವಾಗತಿಸಿದರು. ಜಿಜು ವಾರ್ಕೋಸ್ ವಂದಿಸಿದರು.