ಕಲಾಕುಂಚ ಕೇರಳ ಗಡಿನಾಡ ಘಟಕದ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಶಂನಾ ಅಡಿಗ ಉದ್ಘಾಟಿಸಿದರು. ಎಡನಾಡು ಕೃಷ್ಣ ಮೋಹನ ಭಟ್, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮೊದಲಾದವರಿದ್ದರು.  
ಉಡುಪಿ

ಶ್ರೀರಾಮ ನಡೆದಾಡಿದ ನೆಲ ಕುಂಬಳೆ

ಕುಂಬಳೆ: ಶ್ರೀರಾಮ ನಡೆದಾಡಿದ ನೆಲ ಕುಂಬಳೆ. ಇದು ದ್ವಾಪರದಲ್ಲಿ ಧರ್ಮರಾಜನ ಆಡಳಿತಕ್ಕೊಳಪಟ್ಟಿತ್ತು ಎಂಬ ಐತಿಹ್ಯವಿದೆ. ಹಿಂದೆ ಚೋಳರು, ಪಾಂಡ್ಯರ ಆಡಳಿತದಲ್ಲಿದ್ದ ಇಲ್ಲಿ ಮೂವರು ಕದಂಬ ವಂಶದ ಜಯಸಿಂಹ ಅರಸರು ಆಳ್ವಿಕೆ ನಡೆಸಿದ್ದುಂಟು. 15ನೇ ಶತಮಾನದಿಂದ ಮಾಯಿಪ್ಪಾಡಿ ಮನೆತನದ ರಾಮಂತರಸರು ಉಸ್ತುವಾರಿ ವಹಿಸಿದ್ದರು. ಈ ಪ್ರದೇಶ ಧಾರ್ಮಿಕ, ಸಾಂಸ್ಕೃತಿಕವಾಗಿ ಬಹಳಷ್ಟು ಉನ್ನತಿ ಕಂಡಿತ್ತು ಎಂದು ಎಡನಾಡು ಕೃಷ್ಣಮೋಹನ ಭಟ್ ಹೇಳಿದರು.
ಕಲಾಕುಂಚ ಕೇರಳ ಗಡಿನಾಡ ಘಟಕದ ವತಿಯಿಂದ ಕಾಸರಗೋಡಿನ ಅಸ್ಮಿತೆ ಎಂಬ ಸರಣಿ ಉಪನ್ಯಾಸ ಮಾಲೆಯ ಅಂಗವಾಗಿ ಕುಂಬ್ಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಕುಂಬ್ಳೆಯ ಚಾರಿತ್ರಿಕ ಮಹತ್ವ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಹರಿಕಥಾ ಕಲಾವಿದ ಶಂನಾ ಅಡಿಗ ಕುಂಬ್ಳೆ ಉದ್ಘಾಟಿಸಿದರು. ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಂವಾದದಲ್ಲಿ ಭಾಗವಹಿಸಿದ್ದರು. ಘಟಕದ ಸ್ಥಾಪಕ ಅಧ್ಯಕ್ಷೆ ಜಯಲಕ್ಷ್ಮೀ ಕಾರಂತರು ಅಧ್ಯಕ್ಷತೆ ವಹಿಸಿದ್ದರು. ಭಗವದ್ಗೀತಾ ಪಾರಾಯಣ ಜರುಗಿತು. ಕಲಾಕುಂಚದ ಗೌರವಾಧ್ಯಕ್ಷ ವಿ.ಬಿ.ಕುಳಮರ್ವ ಉಪಸ್ಥಿತರಿದ್ದರು. ರಾಜಾರಾಮ್ ರಾವ್ ಸ್ವಾಗತಿಸಿದರು. ಜಯಲಕ್ಷ್ಮೀ ಆರ್. ಹೊಳ್ಳ ವಂದಿಸಿದರು. ಚೇತನಾ ಹೆಬ್ಬಾರ್ ಪ್ರಾರ್ಥಿಸಿದರು.