ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಕುಡುಪಿ ಅರವಿಂದ ಶೆಣೈ ಪ್ರಾಂತೀಯ ಅಧ್ಯಕ್ಷ ಪ್ರೊ.ಕೆ.ರಂಗಯ್ಯ ಶೆಟ್ಟಿಗಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಮಲಾ ರಂಗಯ್ಯ, ಸ್ವಾತಿ ದಿನೇಶ್, ಭಾರತಿ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.  
ಉಡುಪಿ

ಕುಕ್ಕೆ ಲಯನ್ಸ್‌ಗೆ ಬೆಸ್ಟ್ ಇಮೇಜ್ ಬಿಲ್ಡಿಂಗ್ ಪ್ರಾಜೆಕ್ಟ್ ಪುರಸ್ಕಾರ

ಸುಬ್ರಹ್ಮಣ್ಯ: ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಮತ್ತು ಪ್ರಾಂತ್ಯ 8ಕ್ಕೆ ಈ ಬಾರಿಯ ಬೆಸ್ಟ್ ಇಮೇಜ್ ಬಿಲ್ಡಿಂಗ್ ಪ್ರಾಜೆಕ್ಟ್ ಪುರಸ್ಕಾರ ಲಭಿಸಿದೆ. ಕುಮಾರಧಾರಾ ಸೇತುವೆ ಎರಡು ಬದಿಗಳಲ್ಲಿ ಸಾರ್ವಜನಿಕರು ನದಿಗೆ ಕಸ ಎಸೆಯದಂತೆ ತಡೆ ಬೇಲಿ ನಿರ್ಮಾಣ ಯೋಜನೆಗೆ ಪುರಸ್ಕಾರ ಸಂದಿದೆ. ಲಯನ್ಸ್ ಜಿಲ್ಲೆ 317 ಡಿ ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನೊಳಗೊಂಡ 119 ಕ್ಲಬ್‌ಗಳನ್ನು ಹೊಂದಿದೆ.
ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಕುಡುಪಿ ಅರವಿಂದ ಶೆಣೈ ಪ್ರಾಂತೀಯ ಅಧ್ಯಕ್ಷ ಪ್ರೊ.ಕೆ.ರಂಗಯ್ಯ ಶೆಟ್ಟಿಗಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹಾಗೆಯೇ ಎಲ್ಲ 119 ಲಯನ್ಸ್ ಕ್ಲಬ್‌ಗಳ 15 ಪ್ರಾಂತ್ಯಗಳಲ್ಲಿ ಅತ್ಯುತ್ತಮ ಪ್ರಾಂತೀಯ ಅಧ್ಯಕ್ಷ ಪ್ರಥಮ ಪ್ರಶಸ್ತಿ, ಅತ್ಯುತ್ತಮ ಪ್ರಾಂತೀಯ ಸಮ್ಮೇಳನ ಪ್ರಶಸ್ತಿ, ಎಂಜೆಎಫ್‌ನಲ್ಲಿ ಡೈಮಂಡ್ ಕ್ಲಬ್ ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಅಧ್ಯಕ್ಷರ ಪದಕ ಕೂಡ ಪಡೆದರು.

ಸುಬ್ರಹ್ಮಣ್ಯ ಲಯನ್ಸ್‌ಗೆ ಪುರಸ್ಕಾರ

ಲಯನ್ಸ್ ಜಿಲ್ಲೆ 317ಡಿ ಅತ್ಯುತ್ತಮ ಅಧ್ಯಕ್ಷೆ ದ್ವಿತೀಯ ಪ್ರಶಸ್ತಿ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ವಿಮಲಾ ರಂಗಯ್ಯ, ಲಯನ್ಸ್ ಜಿಲ್ಲೆ ಅತ್ಯುತ್ತಮ ಕಾರ್ಯದರ್ಶಿ ದ್ವಿತೀಯ ಸ್ಥಾನ ಸ್ವಾತಿ ದಿನೇಶ್, ಅತ್ಯುತ್ತಮ ಕೋಶಾಧಿಕಾರಿ ದ್ವಿತೀಯ ಪ್ರಶಸ್ತಿ ಭಾರತಿ ದಿನೇಶ್ ಗಳಿಸಿದರು.
ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ರಾಜೇಶ್ ಎನ್.ಎಸ್., ನಿರ್ದೇಶಕರಾದ ಡಾ.ಶಿವಕುಮಾರ್ ಹೊಸೋಳಿಕೆ, ದಿನೇಶ್ ಮೊಗ್ರ, ಗುರುಪ್ರಸಾದ್ ಪಂಜ, ವಿನ್ಯಾಸ್ ಹೊಸೋಳಿಕೆ ಉಪಸ್ಥಿತರಿದ್ದರು.