ಉಡುಪಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ನೇಮಗೊಂಡ ಕೃಷ್ಣಮೂರ್ತಿ ಡಿ.ಬಿ.
* ನೇಮಕಗೊಂಡ ಪದಾಧಿಕಾರಿಗಳ ಪಟ್ಟಿ ಬಿಡುಗಡೆ
ಉಡುಪಿ: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅನುಮೋದನೆ ಮೇರೆಗೆ ಉಡುಪಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕೃಷ್ಣಮೂರ್ತಿ ಡಿ.ಬಿ. ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಹೆರಿಯಣ್ಣ ಅಮ್ಮುಂಜೆ, ಮಾಧವ ಸಾಲಿಗ್ರಾಮ, ಅನಿತಾ ಸಾಲಿಯಾನ್, ಸುಂದರ್ ಕೆ., ಸುಂದರ್ ಬಾಬು ನಿಯುಕ್ತರಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಸದಾನಂದ್ ಕೈಪುಂಜಾಲು, ಸುಧಾಕರ್ ಅಮೀನ್, ಕಾರ್ಯದರ್ಶಿಗಳಾಗಿ ಸುಂದರ್ ಬಿ. ಈದು, ಸುರೇಶ್ ಮೂಡುಬಗೆ, ಸದಾನಂದ್ ಚಾಂತಾರು, ಬೇಬಿ ರಾಜೇಶ್, ರೇಖಾ ಶಂಕರ್, ಕೋಶಾಧಿಕಾರಿಯಾಗಿ ಈಶ್ವರ್ ಶೀರೂರು, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಅರುಣ್ ಕುಮಾರ್ ನೇಮಕವಾಗಿದ್ದಾರೆ.
ಕಾರ್ಯಕಾರಿಣಿ ಸದಸ್ಯರಾಗಿ ಹರಿಶ್ಚಂದ್ರ, ಸುಂದರ್ ಎ., ಕಿರಣ್ ಕುಮಾರ್, ಪ್ರದಿಪ್ ಮಾರ್ಗೊಳ್ಳಿ, ಶಿವಾನಂದ್, ವೀಣಾ, ಸುರೇಶ್, ಅಣ್ಣಪ್ಪ, ಯಶೋದಾ, ಕೃಷ್ಣ, ಗೀತಾ, ಉದಯ ಕುಮಾರ್ ಬತ್ತಡ, ಮಂಜುಳಾ, ರವೀಂದ್ರ ಎಸ್. ಸೌಕೂರು, ಹರ್ಷ, ನಾಗರತ್ನಾ ನೇಮಕವಾಗಿದ್ದಾರೆ ಎಂದು ಕೃಷ್ಣಮೂರ್ತಿ ಡಿ.ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.