ಕೋಡಿಂಬಾಡಿ ಶಾಲೆಯಲ್ಲಿ ನಿವೃತ್ತಿ ಹೊಂದಿದ ಮುಖ್ಯಶಿಕ್ಷಕ ಬಾಲಕೃಷ್ಣ ಎನ್., ವರ್ಗಾವಣೆಗೊಂಡಿರುವ ಶಿಕ್ಷಕಿಯರಾದ ಪುಷ್ಪಾವತಿ ಕೆ., ಪದ್ಮಾವತಿ ಕೆ., ಸುನೀಲಾ ಅವರನ್ನು ಅಭಿನಂದಿಸಲಾಯಿತು. ರುಕ್ಮಯ ನಾಯ್ಕ, ಜಯಾನಂದ ಕೆ., ಸ್ಫೂರ್ತಿ ಬಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 
ಉಡುಪಿ

ಹುಟ್ಟೂರಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಕೆಪಿಎಸ್

ಪುತ್ತೂರು ಗ್ರಾಮಾಂತರ: ತಾನು ಹುಟ್ಟಿ ಬೆಳೆದ ಊರಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ದೂರದೃಷ್ಟಿಯಿಂದ ಹಾಗೂ ತಾನು ಕಲಿತ ಶಾಲೆ ಅಭಿವೃದ್ಧಿಯತ್ತ ಸಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಕೋಡಿಂಬಾಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಕೆಪಿಎಸ್ ಶಾಲೆಯನ್ನಾಗಿಸುವಲ್ಲಿ ಮತ್ತು ಪಕ್ಕದ ಸೇಡಿಯಾಪು ಪ್ರದೇಶದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕೋಡಿಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಾರ್ವಜನಿಕವಾಗಿ ಆಯೋಜಿಸಲಾದ ನಿವೃತ್ತ ಶಿಕ್ಷಕರು ಮತ್ತು ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ- ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಶೇಖರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಮುರಳೀಧರ ರೈ, ನಿವೃತ್ತ ಪೊಲೀಸ್ ಅಧಿಕಾರಿ ರುಕ್ಮಯ ನಾಯ್ಕ, ಪುತ್ತೂರು ತಾಪಂ ಮಾಜಿ ಅಧ್ಯಕ್ಷ ಜಯಾನಂದ ಕೆ., ಎಸ್‌ಡಿಎಂಸಿ ಉಪಾಧ್ಯಕ್ಷೆ ಸ್ಫೂರ್ತಿ ಬಿ.ಶೆಟ್ಟಿ, ಹಳೇ ವಿದ್ಯಾರ್ಥಿ ಹುಸೈನ್ ಕೆ.ಬಿ.ಕೆ., ಪಾಲಕರಾದ ಲಕ್ಷ್ಮೀ ರೈ, ಸುರೇಶ್ ಶೆಟ್ಟಿ, ಕೋಡಿಂಬಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಉಪಸ್ಥಿತರಿದ್ದರು.
ಪ್ರಭಾರ ಮುಖ್ಯಶಿಕ್ಷಕಿ ಭಾರತಿ ಸ್ವರಮನೆ ಸ್ವಾಗತಿಸಿದರು. ಸಹ ಶಿಕ್ಷಕಿ ವಿಜಯಾ ಪ್ರಭು ವಂದಿಸಿದರು. ಪದವೀಧರ ಶಿಕ್ಷಕಿ ಕವಿತಾ ಮತ್ತು ಗೌರವ ಶಿಕ್ಷಕಿ ನಿರ್ಮಲಾ ನಿರೂಪಿಸಿದರು. ಅತಿಥಿ ಶಿಕ್ಷಕರಾದ ಅಶ್ವಿನಿ, ಅಶ್ವಿತಾ, ಅರುಣಾ ಮತ್ತು ಆಯಾ ವಿದ್ಯಾ ಸಹಕರಿಸಿದರು.

ನಿವೃತ್ತರಿಗೆ ಸನ್ಮಾನ

ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಾಲಕೃಷ್ಣ ಎನ್., ವರ್ಗಾವಣೆಗೊಂಡಿರುವ ಶಿಕ್ಷಕಿಯರಾದ ಪುಷ್ಪಾವತಿ ಕೆ. ಮತ್ತು ಪದ್ಮಾವತಿ ಕೆ. ಹಾಗೂ ಮುಂಬಡ್ತಿ ಹೊಂದಿ ವರ್ಗಾವಣೆಗೊಂಡ ಶಿಕ್ಷಕಿ ಸುನೀಲಾ ಅವರನ್ನು ಅಭಿನಂದಿಸಲಾಯಿತು.