ಆಲ್ವಿನ್ ಸಿಕ್ವೇರಾರನ್ನು ಸನ್ಮಾನಿಲಾಯಿತು. ಜೋಕಿಂ ಸ್ಟ್ಯಾನಿ ಆಲ್ವಾರಿಸ್ , ಕವಿ ಅರವಿಂದ ಶ್ಯಾನ್‌ಭಾಗ್, ಮಂಜುಳಾ ನಾಯಕ್ ಉಪಸ್ಥಿತರಿದ್ದರು. 
ಉಡುಪಿ

ಕೊಂಕಣಿ ಸಾಹಿತ್ಯ ಅಕಾಡೆಮಿ ಕಾವ್ಯಾಂ ವ್ಹಾಳೊ ಕವಿಗೋಷ್ಠಿ

ಮಂಗಳೂರು : ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕಾವ್ಯಾಂ ವ್ಹಾಳೊ-10 ಕವಿಗೋಷ್ಠಿ ಅಕಾಡೆಮಿಯ ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್ ಮುಖ್ಯ ಅತಿಥಿಯಾಗಿದ್ದರು.
ಕಳೆದ 46 ವರ್ಷಗಳಿಂದ ಕೊಂಕಣಿ ಸಾಹಿತ್ಯಿಕ ಪುಸ್ತಕಗಳನ್ನು ಹಾಗೂ ಸಿಡಿಗಳನ್ನು ಊರಿಂದೂರಿಗೆ ಕೊಂಡುಹೋಗಿ ಮಾರಿ, ಸಾಹಿತ್ಯ ಸೇವೆ ಮಾಡುತ್ತಿರುವ ಆಲ್ವಿನ್ ಸಿಕ್ವೇರಾ ಇವರನ್ನು ಸನ್ಮಾನಿಲಾಯಿತು. ಕವಿ ಅರವಿಂದ ಶ್ಯಾನ್‌ಭಾಗ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಮರ್ಲಿನ್ ಮಸ್ಕರೇನ್ಹಸ್, ನವೀನ್ ಕುಲ್ಶೇಕರ್, ವಾಯ್ಲೆಟ್ ಪಿರೇರಾ, ಸುಮಾ ವಸಂತ್, ರಿಚ್ಚಿ ಪಿರೇರಾ, ಪ್ರೀತಾ ಮಿರಾಂದ, ಸ್ಟ್ಯಾನಿಸ್ಲಸ್ ಡಿಸೋಜ, ಎಡ್ವರ್ಡ್ ಲೋಬೊ, ಅರುಣ್ ದಾಂತಿ, ಸಪ್ನಾ ಮೇ ಕ್ರಾಸ್ತಾ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯೆ ಅಕ್ಷತಾ ನಾಯಕ್ ಉಪಸ್ಥಿತರಿದ್ದರು. ಸಮರ್ಥ್ ಭಟ್ ಕಾರ್ಯಕ್ರಮ ನಿರೂಪಿಸಿದರು