ಕೊಕ್ಕರ್ಣೆ ದಸರಾ ನಾಲ್ಕನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪ್ರಮುಖರಾದ ಉದಯ್ ಕುವಾರ್ ಶೆಟ್ಟಿ ಮಂದಾರ್ತಿ, ಪ್ರಸಾದ್ ಹೆಗ್ಡೆ ನಂಚಾರು, ಪುರುಷೋತ್ತಮ ಮೊದಲಾದವರಿದ್ದರು. 
ಉಡುಪಿ

ಭಗವಂತನ ಸ್ಮರಣೆ ವಾಡಿದರೆ ಮುಕ್ತಿ ಪ್ರಾಪ್ತಿ

ಕೊಕ್ಕರ್ಣೆ ದಸರಾ ಧಾರ್ಮಿಕ ಸಭೆ

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಎಳವೆಯಲ್ಲಿಯೇ ಮಕ್ಕಳನ್ನು ದೇವಸ್ಥಾನಗಳಿಗೆ ಕರೆದುಕೊಂಡು ಹೋಗಬೇಕು. ದೇವರ ನಾಮ, ಭಜನೆ, ಸ್ತೋತ್ರ, ಸಂಕೀರ್ತನೆ ಮುಂತಾದವುಗಳಲ್ಲಿ ಭಾಗವಹಿಸುವಂತೆ ಹಿರಿಯರು ಹೇಳಬೇಕು. ಮೊಬೈಲ್, ಟಿವಿ ಮುಂತಾದ ಸಾವಾಜಿಕ ಜಾಲತಾಣಗಳಿಂದ ಸಾಧ್ಯವಾದಷ್ಟು ದೂರವಿದ್ದು, ಭಗವಂತನ ಸ್ಮರಣೆ ವಾಡಿ ಮುಕ್ತಿ ಪಡೆಯಬೇಕು ಎಂದು ಉದ್ಯಮಿ ಪ್ರಸಾದ್ ಹೆಗ್ಡೆ ನಂಚಾರು ಹೇಳಿದರು.

ಕೊಕ್ಕರ್ಣೆ ದಸರಾ ನಾಲ್ಕನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉದ್ಯಮಿ ಉದಯ್ ಕುವಾರ್ ಶೆಟ್ಟಿ ಮಂದಾರ್ತಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇ ಸೂಪರ್‌ವೈಸರ್ ಪುರುಷೋತ್ತಮ, ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಉಪವಿಭಾಗೀಯ ಮುಖ್ಯ ದಂತ ಆರೋಗ್ಯಾಧಿಕಾರಿ ಡಾ.ಬೀಸು ನಾಯ್ಕ, ಪ್ರಮುಖರಾದ ಮನೋಹರ್ ಶೆಟ್ಟಿ, ಜಯರಾಮ್ ನಾಯಕ್, ಸುಧಾಕರ್ ಕೋಟ್ಯಾನ್, ಲೀಲಾವತಿ ಶ್ರೀನಿವಾಸ ಆಚಾರ್ಯ, ಸುಧೀಂದ್ರ ನಾಯಕ್ ಕೊಕ್ಕರ್ಣೆ, ಜ್ಯೋತಿ ಎಂ.ಪ್ರಭು, ನವೀನ್ ಚಂದ್ರ ಶೆಟ್ಟಿ ಮತ್ತಿತರರಿದ್ದರು.

ಸಮಿತಿ ಅಧ್ಯಕ್ಷ ಹರೀಶ್ ಶ್ಯಾನುಭಾಗ್ ಸ್ವಾಗತಿಸಿದರು. ರಮೇಶ್ ಕೋಟಂಬೈಲು ನಿರೂಪಿಸಿದರು. ಗಣೇಶ್ ವಂದಿಸಿದರು.

ಶ್ರೀ ಸೂಕ್ತ ಹವನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ಭರತಾಂಜಲಿ ನೃತ್ಯ ನಿಲಯಂ ನೃತ್ಯಗುರು ಪ್ರೀತಿ ಪುರುಷೋತ್ತಮ್ ಶಿಷ್ಯರಿಂದ ನೃತ್ಯ ಸಂಕಲ್ಪ, ಪೂಜೆ ನಡೆಯಿತು.

ಇಂದಿನ ಕಾರ್ಯಕ್ರಮ

ಅ.16ರಂದು 6.30ಕ್ಕೆ ಕೊಕ್ಕರ್ಣೆಯಿಂದ ವಾಹನ ರ‌್ಯಾಲಿ ಮೂಲಕ ಬ್ರಹ್ಮಾವರದಿಂದ ಕೊಕ್ಕರ್ಣೆಗೆ ರಜತ ಮುಕುಟಧಾರಿಣಿ ಶಾರದಾ ದೇವಿ ವಿಗ್ರಹ ಪುರಪ್ರವೇಶ, ಚಂಡಿಕಾ ಹೋಮ, ಶಾರದಾ ವಿಗ್ರಹ ಪ್ರತಿಷ್ಠಾಪನೆ, ಅಕ್ಷರಾಭ್ಯಾಸ ಸಂಸ್ಕಾರ ಕಾರ್ಯಕ್ರಮ, ಭಾಸ್ಕರ್ ಆಚಾರ್ ಕಾಡೂರು ಅವರಿಂದ ಭಕ್ತಿ ಸೌರಭ, ಮುಷ್ಟಿಕಾಣಿಕೆ ನಡೆಯಲಿದೆ. ಬೆಳಗ್ಗೆ 11ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಉದ್ಯಮಿ ವತ್ಸಲಾ ದಯಾನಂದ ಶೆಟ್ಟಿ ವಹಿಸುವರು. ಪಾದೇಮಠ ಶ್ರೀ ವೀರೇಶ್ವರ ವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಕೆಂಜೂರು ದೀಪ ಪ್ರಜ್ವಲನೆಗೈಯುವರು. ಪತ್ರಕರ್ತ ಕೆ.ಸಿ.ರಾಜೇಶ್ ಕುಂದಾಪುರ ಮುಷ್ಟಿಕಾಣಿಕೆ ಮಹತ್ವದ ಕುರಿತು ದಿಕ್ಸೂಚಿ ಭಾಷಣಗೈಯುವರು. ಮಧ್ಯಾಹ್ನ ಚಂಡಿಕಾ ಹೋಮ, ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಶಿಕ್ಷಕ ಅರುಣ್ ಕುವಾರ್ ಶೆಟ್ಟಿ ಕೆಂಜೂರು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶರನ್ನವರಾತ್ರಿ ಉತ್ಸವ ಸಮಿತಿ ಧಾರ್ಮಿಕ ಸಮಿತಿ ಸಂಚಾಲಕ ಕೆ.ರವೀಂದ್ರ ಕಾಮತ್ ದೀಪಪ್ರಜ್ವಲನೆಗೈಯುವರು. ಕುಂದಾಪುರ ಎಕ್ಸಲೆಂಟ್ ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಎಕ್ಸಲೆಂಟ್ ಸಾಂಸ್ಕೃತಿಕ ವೈಭವ ನಡೆಯಲಿದೆ.