ನಾಲಂದ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಪುಸ್ತಕ ಪ್ರದರ್ಶನ ಉದ್ಘಾಟಿಸಲಾಯಿತು. ಗ್ರಂಥಪಾಲಕ ರಾಮ ಕೆ., ಪ್ರಾಂಶುಪಾಲ ಡಾ.ಮೋಹನ್ ಕುಂಟಾರ್, ಉಪಪ್ರಾಂಶುಪಾಲ ಶಂಕರ ಖಂಡಿಗೆ ಉಪಸ್ಥಿತರಿದ್ದರು.
ಪೆರ್ಲ: ಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನ ವಿಸ್ತರಿಸುವುದರ ಜತೆಗೆ ಉತ್ತಮ ಯೋಜನೆ, ಯೋಚನೆ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ರಾಮ ಕೆ. ಅಭಿಪ್ರಾಯಪಟ್ಟರು.
ಪೆರ್ಲ ನಾಲಂದ ಕಾಲೇಜಿನಲ್ಲಿ ಗ್ರಂಥಾಲಯ ಸಮಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಖ್ಯೆ 49ರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಮತ್ತು ರಾಮಾಯಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಪುಸ್ತಕ ಪ್ರದರ್ಶನ ಮತ್ತು ವಿಶೇಷ ಉಪನ್ಯಾಸ ನಡೆಯಿತು. 2025-26ನೇ ಶೈಕ್ಷಣಿಕ ವರ್ಷದ ಪದವಿ ಪರೀಕ್ಷೆಯ ಟಾಪರ್‌ಗಳನ್ನು ಗೌರವಿಸಲಾಯಿತು.
ಉಪನ್ಯಾಸಕಿ ಶಿಲ್ಪಾ ಪಿ. ವಂದಿಸಿದರು. ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥೆ ಅನುಪಮಾ ನಿರೂಪಿಸಿದರು.