ಬಂಟರ ಭವನದ ವೇದಿಕೆಯಲ್ಲಿ ನಡೆದ ಯಕ್ಷ ಕಿಶೋರ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನ ನೀಡಿದರು.
ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ಉಡುಪಿ ಜಿಲ್ಲೆಯ 94 ಪ್ರೌಢಶಾಲೆಗಳ 3,000 ವಿದ್ಯಾರ್ಥಿಗಳ ‘ಕಿಶೋರ ಯಕ್ಷಗಾನ ಸಂಭ್ರಮ’ ಬ್ರಹ್ಮಾವರದಲ್ಲಿ ಚಾಲನೆ ಗೊಂಡಿದ್ದು, ಬಂಟರ ಭವನದ ವೇದಿಕೆಯಲ್ಲಿ ಪ್ರತಿದಿನ ಎರಡು ಶಾಲೆಗಳ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶಿಸಿದರು.
ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ ಕಳೆದ ಹದಿನೆಂಟು ವರ್ಷಗಳಿಂದ ಕಿಶೋರ ಯಕ್ಷಗಾನ ಸಂಭ್ರಮ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವಿದ್ಯಾರ್ಥಿಗಳಲ್ಲಿ ಮುಕ್ಕಾಲು ಭಾಗ ಯುವತಿಯರೇ ಇದ್ದಾರೆ. 1 ಕೋಟಿ ರೂ.ವರೆಗೆ ವೆಚ್ಚ ತಗಲುತ್ತಿದ್ದು, ದಾನಿಗಳು ಮತ್ತು ಕಲಾಪೋಷಕರ ನೆರವಿನಿಂದ ಯಕ್ಷಗಾನ ನಡೆಸಿಕೊಂಡು ಬರಲಾಗುತ್ತಿದೆ.
ಯಕ್ಷಗಾನ ಕಲೆ ಉಳಿಸುವ ಪ್ರಯತ್ನ: ಚೌಕಿ ಪೂಜೆ, ಗಣಪತಿ ಪೂಜೆ, ಬಾಲಗೋಪಾಲ, ಸ್ತ್ರೀ ವೇಷ, ಒಡ್ಡೋಲಗ ಎಲ್ಲವೂ ಶ್ರುತಿಬದ್ಧ, ಸಂಪ್ರದಾಯ ಬದ್ಧವಾಗಿಟ್ಢ. ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವ ಕಾರ್ಯ ವಿದ್ಯಾರ್ಥಿಗಳಿಂದ ನಡೆಯುತ್ತಿದೆ. ಬ್ರಹ್ಮಾವರದಲ್ಲಿ ನ.26ಕ್ಕೆ ಆರಂಭಗೊಂಡಿರುವ ಯಕ್ಷಗಾನ ಪ್ರದರ್ಶನ ಡಿ.1ರಂದು ಸಂಪನ್ನಗೊಂಡಿದ್ದು, 13 ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಲಾಯಿತು.
ತರಬೇತಿಗೆ ನೀಡುವ ಗುರುಗಳ ಗೌರವಧನ, ಪ್ರದರ್ಶನದಂದು ಭಾಗವತರು, ಮದ್ದಳೆಗಾರರು, ಚಂಡೆವಾದಕರು ಮತ್ತು ವೇಷ ಭೂಷಣ, ಧ್ವನಿ, ಬೆಳಕು ಹಾಗೂ ವೇದಿಕೆಗೆ ತಗಲುವ ಖರ್ಚು ಒಂದೆಡೆಯಾದರೆ, ಪ್ರತಿ ಪ್ರದರ್ಶನ ಸಮಿತಿಯಲ್ಲಿ ನೂರಾರು ಸ್ವಯಂ ಸೇವಕರ ಸೇವೆಯೂ ಅಪಾರವಾದುದು.
ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಪ್ರದರ್ಶನ ಸಂಟನಾ ಸಮಿತಿ ಅಧ್ಯಕ್ಷ ಸುಧೀರ್ ಕುವಾರ್ ಶೆಟ್ಟಿ, ಬಿ.ಭುಜಂಗ ಶೆಟ್ಟಿ, ಆರೂರು ತಿಮ್ಮಪ್ಪ ಹೆಗ್ಡೆ, ದಿನಕರ ಹೇರೂರು, ಟಿ.ಭಾಸ್ಕರ್ ರೈ, ಮೈರ್ವಾಡಿ ಅಶೋಕ್ ಕುವಾರ್ ಶೆಟ್ಟಿ, ಬಿರ್ತಿ ರಾಜೇಶ ಶೆಟ್ಟಿ, ಎಂ.ಗಂಗಾಧರ ರಾವ್, ರಾಜು ಕುಲಾಲ್, ವಾರಾಳಿ ಪ್ರತಾಪ ಹೆಗ್ಡೆ, ಬಿ.ಆರ್.ನಿತ್ಯಾನಂದ, ನಾರಾಯಣ ಎಂ.ಹೆಗಡೆ ಉಪಸ್ಥಿತರಿದ್ದರು.
ಕರಾವಳಿ ಜಿಲ್ಲೆಯ ನವರಸ ಕಲೆ ಯಕ್ಷಗಾನದಲ್ಲಿ ಬರುವ ಸನಾತನ ಧರ್ಮದ ಆಚರಣೆ ಬಗ್ಗೆ ಶಾಲಾ ಹಂತದಲ್ಲೇ ಅರಿವು ಮೂಡಿಸಿ, ವಿದ್ಯಾರ್ಥಿಗಳ ಮೂಲಕವೇ ಮುಂದಿನ ತಲೆಮಾರಿಗೆ ಕಲೆ ಉಳಿಸುವ ಕಾರ್ಯ ನಡೆಯುತ್ತಿದೆ.
ಆಂಗ್ಲ ವಾಧ್ಯಮ ಶಾಲಾ ವಿದ್ಯಾರ್ಥಿಗಳು ಕೂಡಾ ಯಕ್ಷಗಾನ ವೇಷ ಪಾತ್ರದಲ್ಲಿ ಪರಕಾಯ ಪ್ರವೇಶ ವಾಡಿ ಶುದ್ಧ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸುವ ಮತ್ತು ಬೆಳೆಸುವ ಈ ಕಾರ್ಯಕ್ಕೆ ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಬೆಂಬಲ ತೀರಾ ಕಡಿಮೆ ಇರುವುದು ವಿಷಾದನೀಯ. ಸರ್ಕಾರ ವಾಡಬೇಕಾದ ಇಂತಹ ಕಾರ್ಯ ಸವಾಜದ ಕಲಾಸಕ್ತರಿಂದ ಮತ್ತು ಶಾಸಕರಿಂದ ಒಂದು ಕೋಟಿ ರೂ. ವೆಚ್ಛ ತಗಲುತ್ತದೆ.