ಶಾಸಕ ಯಶ್​ಪಾಲ್​ ಸುವರ್ಣ ಕ್ರೀಡಾಕೂಟವನ್ನು ಉದ್ಘಾಟಿಸಿದರು. 
ಉಡುಪಿ

ಖೇಲೋ ಇಂಡಿಯಾ ಬಾಲಕಿಯರ ಅತ್ಲೆಟಿಕ್​ ಕೂಟ ಉದ್ಘಾಟನೆ

ಉಡುಪಿ: ಜಿಲ್ಲಾ ಅಮೆಚೂರು ಅತ್ಲೆಟಿಕ್​ ಸಂಸ್ಥೆಯ ವತಿಯಿಂದ ಖೇಲೋ ಇಂಡಿಯಾ ಬಾಲಕಿಯರ ಅತ್ಲೆಟಿಕ್​ ಕೂಟ ಭಾನುವಾರ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿತು.

ಶಾಸಕ ಯಶ್​ಪಾಲ್​ ಸುವರ್ಣ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಜಿಲ್ಲಾ ಅಮೆಚೂರು ಅತ್ಲೆಟಿಕ್​ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್​ ರೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ರಾಷ್ಟ್ರೀಯ ಅಥ್ಲೆಟ್​ ಡಾ.ಸ್ಯಾಂಡ್ರಾ ಅನ್ಸಿಲಾ ಡಿಸೋಜ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್​ ಕುಮಾರ್​ ಶೆಟ್ಟಿ, ತರಬೇತುದಾರ ಶಿವಕುಮಾರ್​ ಉಪಸ್ಥಿತರಿದ್ದರು. ಜಿಲ್ಲಾ ಅಮೆಚೂರು ಅತ್ಲೆಟಿಕ್​ ಸಂಸ್ಥೆಯ ದಿನೇಶ್​ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವರದರಾಜ್​ ಕಾರ್ಯಕ್ರಮ ನಿರೂಪಿಸಿದರು. ಈ ಕ್ರೀಡಾಕೂಟದಲ್ಲಿ 14ವರ್ಷದೊಳಗಿನ ಮತ್ತು 16ವರ್ಷದೊಳಗಿನ 150 ಬಾಲಕಿಯರು ಪಾಲ್ಗೊಂಡಿದ್ದರು.