ಕೆಂಪೇಗೌಡರ 517ನೇ ಜನ್ಮದಿನಾಚರಣೆ ಕಾರ್ಯಕ್ರಮ ಕುಕ್ಕೆ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಉದ್ಘಾಟಿಸಿದರು. ಕಿರಣ್ ಚಂದ್ರ ಪುಷ್ಪಗಿರಿ, ರಾಮಣ್ಣ ಗೌಡ, ಲಿಂಗಪ್ಪ ಗೌಡ, ಜನಾರ್ದನ ಗೌಡ, ಪಿ.ಎಸ್.ಗಂಗಾಧರ್ ಮೊದಲಾದವರಿದ್ದರು.  
ಉಡುಪಿ

ಕೆಂಪೇಗೌಡರ ದೂರದೃಷ್ಟಿತ್ವ ಎಲ್ಲರಿಗೂ ಮಾದರಿ

ಬೆಳ್ತಂಗಡಿ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಆಡಳಿತ ವೈಖರಿ ಹಾಗೂ ಸಮಾಜಮುಖಿ ಚಿಂತನೆಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಳ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಹೇಳಿದರು.
ರಾಜ್ಯ ಒಕ್ಕಲಿಗರ ಸಂಘ, ಗೌಡರ ಯಾನೆ ಒಕ್ಕಲಿಗರ ದ.ಕ. ಜಿಲ್ಲಾ ಮಾತೃ ಸಂಘ, ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಾಗೂ ಹಳೇಕೋಟೆ ವಾಣಿ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ವಾಣಿ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ಅಧ್ಯಕ್ಷ ಲೋಕಯ್ಯ ಗೌಡ ಕೆ. ಅಧ್ಯಕ್ಷತೆ ವಹಿಸಿದ್ದರು. ನಾಡಪ್ರಭು ಕೆಂಪೇಗೌಡ ಹಾಗೂ ಕೆದಂಬಾಡಿ ರಾಮಯ್ಯ ಗೌಡರ ಭಾವಚಿತ್ರಗಳಿಗೆ ಅತಿಥಿಗಳು ಪುಷ್ಪಾರ್ಚನೆ ಮಾಡಿದರು.
ಕಿರಣ್ ಚಂದ್ರ ಪುಷ್ಪಗಿರಿ, ಜಿಲ್ಲಾ ಮಾತೃ ಸಂಘ ಕಾರ್ಯದರ್ಶಿ ರಾಮಣ್ಣ ಗೌಡ, ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ಉಪಾಧ್ಯಕ್ಷ ಲಿಂಗಪ್ಪ ಗೌಡ, ಜನಾರ್ದನ ಗೌಡ, ಸುಳ್ಯ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಧ್ಯಕ್ಷ ಪಿ.ಎಸ್.ಗಂಗಾಧರ್, ಜಿಲ್ಲಾ ಮಾತೃ ಸಂಘ ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ, ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕಾರ್ಯದರ್ಶಿ ಗಣೇಶ್ ಗೌಡ, ವಾಣಿ ವಿದ್ಯಾಸಂಸ್ಥೆ ಪ್ರಾಂಶುಪಾಲ ವಿಷ್ಣು ಪ್ರಕಾಶ್, ಮುಖ್ಯಶಿಕ್ಷಕರಾದ ಲಕ್ಷ್ಮೀನಾರಾಯಣ ಕೆ. ಹಾಗೂ ಸುಹಾಸಿನಿ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್, ರಾಮಣ್ಣ ಗೌಡ, ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಉಪಾಧ್ಯಕ್ಷ ನಾರಾಯಣ ಗೌಡ, ಡಿ.ಎಂ.ಗೌಡ, ಜತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಂ., ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ, ಧರಣಪ್ಪ ಗೌಡ, ವಾಣಿ ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ ಪ್ರಸಾದ್, ನಿವೃತ್ತ ಪ್ರಾಂಶುಪಾಲ ಯದುಪತಿ ಗೌಡ, ನಿರ್ದೇಶಕರಾದ ವಿಜಯ ಗೌಡ, ಉಷಾ ದೇವಿ, ಭವಾನಿ ಗೌಡ, ದಿನೇಶ್, ಮಾಧವ ಗೌಡ, ಬಾಲಕೃಷ್ಣ ಬಿರ್ಮೋಟ್ಟು, ತಾಲೂಕು ಗೌಡ ಸಂಘ ಮಾಜಿ ನಿರ್ದೇಶಕ ವಿಜಯ್ ಕುಮಾರ್, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ಸುರೇಶ್ ಕೌಡಂಗೆ, ಗೋಪಾಲ ಕೃಷ್ಣ ಗುಲ್ಲೋಡಿ, ಯುವ ವೇದಿಕೆ ಉಪಾಧ್ಯಕ್ಷ ನಿತಿನ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ನಾಗಾಜೆ, ಉದ್ಯಮಿ ಗಣೇಶ್ ಗೌಡ, ಮಹಿಳಾ ವೇದಿಕೆ ಸದಸ್ಯರು, ಜಿಲ್ಲಾ ಮಾತೃ ಸಂಘ ಸದಸ್ಯರು, ವಿವಿಧ ಗ್ರಾಮ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ಶಿಕ್ಷಕರು ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಘದು ಜತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಂ. ಸ್ವಾಗತಿಸಿದರು. ಬೆಳಿಯಪ್ಪ ಕೆ. ಹಾಗೂ ವಿಜೇತಾ ನಿರೂಪಿಸಿದರು. ಗಣೇಶ್ ಗೌಡ ವಂದಿಸಿದರು.

ಬಹುಮಾನ ವಿತರಣೆ

ನಾಡಪ್ರಭು ಕೆಂಪೇಗೌಡರ ಕುರಿತು ಏರ್ಪಡಿಸಿದ್ದ ಭಾಷಣ ಸ್ಪರ್ಧೆವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಸೃಷ್ಟಿ (ಪ್ರ), ನಿಶಾ ಮತ್ತು ಬಿಂದುಶ್ರೀ (ದ್ವಿ), ಮಾನ್ವಿ (ತೃ), ಪಿಯು ವಿಭಾಗದಲ್ಲಿ ಅಮೋಘ (ಪ್ರ), ಕೀರ್ತನಾ ಹಾಗೂ ಜೋವಿಟಾ (ದ್ವಿ) ಮತ್ತು ಶರಣ್ಯಾ ತೃತೀಯ ಸ್ಥಾನ ಪಡೆದರು.

ಉಪನ್ಯಾಸ, ಪ್ರಶಸ್ತಿ ಪ್ರದಾನ

ನಡ ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕ ಮೋಹನ ಗೌಡ ನಾಡಪ್ರಭು ಕೆಂಪೇಗೌಡರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಿಕ್ಷಣ, ಸಹಕಾರಿ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನನ್ಯ ಸೇವೆ ಪರಿಗಣಿಸಿ ವಾಣಿ ವಿದ್ಯಾಸಂಸ್ಥೆ ಗೌರವಾಧ್ಯಕ್ಷರಾದ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಎಚ್.ಪದ್ಮ ಗೌಡ ಅವರಿಗೆ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದಿಂದ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.