ತಾಲೂಕು ಪಂಚಾಯತಿ ಪ್ರಗತಿ ಪರಿಶೀಲನೆ ಸಭೆ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುವಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಅಧಿಕಾರಿಗಳಾದ ಪ್ರದೀಪ್ ಡಿಸೋಜ, ವಿಶ್ವನಾಥ್ ಬಿ., ವಿಜಯ್‌ಶಂಕರ್ ಆಳ್ವ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಮಳೆಗಾಲ ಆರಂಭವಾಗಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತೆ ವಹಿಸಬೇಕು. ಗುಡ್ಡ ಪ್ರದೇಶಗಳಲ್ಲಿ ಹಾಗೂ ಅನಾಹುತ ಸಂಭವಿಸುವ ಸಾಧ್ಯತೆ ಇರುವ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿ.ಸಿ.ರೋಡಿನ ಎಸ್‌ಜೆಎಸ್‌ಆರ್‌ವೈ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ ಸಭೆ, ಆದಾಯ ತೆರಿಗೆ ಹಾಗೂ ನ ತ್ಯಾಜ್ಯ ನಿರ್ವಹಣೆ ನಿಯಮಗಳ ಕುರಿತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನರೇಗಾ ವಾನವ ದಿನಗಳ ಸೃಜನೆ ಗುರಿ, ನೋಂದಾಯಿತ ಕೂಲಿಕಾರರ ಇಕೆವೈಸಿ ಪ್ರಗತಿ, ನಮ್ಮ ಗ್ರಾಮ ನಮ್ಮ ಪರಂಪರೆ, ಎಫ್‌ಟಿಕೆ, ವಸತಿ ಯೋಜನೆಗಳು, ತೆರಿಗೆ ಸಂಗ್ರಹ ಹಾಗೂ ಎಸ್‌ಬಿಎಂ ವಿಷಯಗಳಿಗೆ ಸಂಬಂಧಿಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಯಿತು.
ಸಂಪನ್ಮೂಲ ವ್ಯಕ್ತಿ ಮಂಗಳೂರು ವಾರ್ಡ್ 1ರ ಆದಾಯ ತೆರಿಗೆ ಅಧಿಕಾರಿ ಸುನಂದಾ ಆರ್.ಪ್ರಸಾದ್ ಮಾತನಾಡಿ ಟಿಡಿಎಸ್ ಸಲ್ಲಿಕೆ, ಟಿಡಿಎಸ್ ರಿಟರ್ನ್ ಹಾಗೂ ಹೊಸ ನಿಯಮಗಳ ಕುರಿತು ವಾಹಿತಿ ನೀಡಿದರು. ಡಿಜಿಟಲ್ ಪೋರ್ಟಲ್ ಮೂಲಕ ಸುಲಭವಾಗಿ ಟಿಡಿಎಸ್ ರಿಟರ್ನ್ಸ್ ಸಲ್ಲಿಸುವ ವಿಧಾನದ ಬಗ್ಗೆಯೂ ತಿಳಿಸಿದರು.
ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ತಾಪಂ ಸಹಾಯಕ ನಿರ್ದೇಶಕ ವಿಶ್ವನಾಥ್ ಬಿ., ವಿಜಯ್ ಶಂಕರ್ ಆಳ್ವ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಚಂದ್ರಮೋಹನ್, ರಾಹುಲ್, ಪಿಡಿಒಗಳು, ತಾಪಂ ವಿಷಯ ನಿರ್ವಾಹಕರು, ನರೇಗಾ ಸಿಬ್ಬಂದಿ ಉಪಸ್ಥಿತರಿದ್ದರು.
ಘನತಾಜ್ಯ ನಿರ್ವಹಣೆಗೆ ಕಾರ್ಯಾಗಾರ
ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾವಾನ ಬದಲಾವಣೆ ಸಚಿವಾಲಯ ಜಾರಿಗೊಳಿಸಿದ ನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ವಾಹಿತಿ ಕಾರ್ಯಾಗಾರ ನಡೆಯಿತು. ಎಸ್‌ಬಿಎಂ ಜಿಲ್ಲಾ ಸವಾಲೋಚಕ ನವೀನ್ ಹಾಗೂ ಜಿಲ್ಲಾ ಐಇಸಿ ಸಂಯೋಜಕ ಡೊಂಬಯ್ಯ ಕಾರ್ಯಾಗಾರ ನಡೆಸಿಕೊಟ್ಟರು.