MISSING 
ಉಡುಪಿ

ಕೆದಂಬಾಡಿಯ ರಿಕ್ಷಾ ಚಾಲಕ ನಾಪತ್ತೆ

ಪುತ್ತೂರು ಗ್ರಾಮಾಂತರ: ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತ್ಯಾಜರಾಜನಗರ ನಿವಾಸಿ, ಆಟೋರಿಕ್ಷಾ ಚಾಲಕ ಮಹಮ್ಮದ್ ರಫೀಕ್ ಕೆ.(40) ನಾಪತ್ತೆಯಾಗಿರುವ ಕುರಿತು ಸಂಪ್ಯ ಠಾಣೆಗೆ ದೂರು ನೀಡಲಾಗಿದೆ.

ಪ್ರತಿ ದಿನ ಪುತ್ತೂರಿಗೆ ಹೋಗಿ ಆಟೋರಿಕ್ಷಾ ಬಾಡಿಗೆ ಮಾಡುತ್ತಿದ್ದ ಅವರು ಆ.2ರಂದು ರಾತ್ರಿ 7.30ರ ವೇಳೆಗೆ ಬಾಡಿಗೆ ಇರುವುದಾಗಿ ಹೇಳಿ ಮನೆಯಿಂದ ಹೊರಟವರು ವಾಪಸ್ ಬಂದಿಲ್ಲ.

ಮೊಬೈಲ್ ಸ್ವಿಚ್‌ಆಫ್ ಆಗಿದ್ದು, ಆಟೋ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ಕಂಡು ಬಂದಿದೆ ಎಂದು ರಫೀಕ್ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಂಪ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.