ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಶ್ರೀಗಳ ಪರಾಭವ ನಾಮ ಸಂವತ್ಸರದ ಚಾತುರ್ವಾಸ್ಯ ವ್ರತ ಪೂರ್ವಭಾವಿ ಸಭೆ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಳದಲ್ಲಿ ನಡೆಯಿತು. ಪ್ರಮುಖರಾದ ದಿನೇಶ್ ಕಾಮತ್, ಶ್ರೀಧರ್ ಕಾಮತ್, ಜಿ.ಎಸ್.ಬಿ ಸರ್ವ ದೇವಾಲಯಗಳ ಒಕ್ಕೂಟ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಶ್ರೀಗಳ ಪರಾಭವ ನಾಮ ಸಂವತ್ಸರದ ಚಾತುರ್ವಾಸ್ಯ ವ್ರತ ಶ್ರೀ ಕ್ಷೇತ್ರ ಕಾಶಿಯ ಮೂಲ ಮಠದಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಳದಲ್ಲಿ ಗುರುವಾರ ನಡೆಯಿತು.
ಚಾತುರ್ವಾಸ್ಯ ವ್ರತಾಚರಣೆ ಸಮಯದಲ್ಲಿ ನಡೆಯುವ ಧಾರ್ಮಿಕ, ಸಾವಾಜಿಕ ಕಾರ್ಯಕ್ರಮದ ಕುರಿತು ಸಭೆಗೆ ವಾಹಿತಿ ನೀಡಿದ ಒಕ್ಕೂಟ ಅಧ್ಯಕ್ಷ ಅತುಲ್ ಕುಡ್ವ, ಆ.3ರಂದು ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಚಾತುರ್ಮಾಸ್ಯ ವ್ರತ ಸ್ವೀಕರಿಸಲಿದ್ದಾರೆ.
ಪ್ರತಿದಿನ ಪಂಚಗವ್ಯ ಪ್ರಾಶನ ಹಾಗೂ ಪಂಚಗವ್ಯ ಹವನ, ಗಂಗಾ ಪೂಜನ, ಶ್ರೀ ಕಾಶಿ ಮೂಲ ಮಠದಲ್ಲಿರುವ ಶ್ರೀ ಬ್ರಹ್ಮೇಶ ದೇವರಿಗೆ ಪ್ರತಿನಿತ್ಯ ರುದ್ರಾಭಿಷೇಕ, ಪ್ರತಿದಿನ ನಾರಿಕೇಳ ಗಣಪತಿ ಯಾಗ ಹಾಗೂ ಮೂಲ ಮಂತ್ರ ಹವನ, ಮಧ್ಯಾಹ್ನ ವಿಷ್ಣು ಸಹಸ್ರನಾಮ ಪಾರಾಯಣ, ಅರ್ಚನೆ, ಪಠಣ ನಡೆಯಲಿದೆ ಎಂದರು.
ಸಾಯಂಕಾಲ ಗಂಗಾರತಿ, ನರಸಿಂಹ ಸ್ತುತಿ ನಮಸ್ಕಾರ, ಸುಮಂಗಲಿಯರಿಂದ ದೀಪಾರಾಧನೆ, ಕುಂಕುವಾರ್ಚನೆ, ಮಡಿಲು ತುಂಬುವುದು, ಪುಷ್ಪಾಂಜಲಿ ಸೇವೆ, ವೈದಿಕರಿಂದ ಸಪ್ತಶತಿ ಪಾರಾಯಣ ನಡೆಯಲಿದೆ. ಪ್ರತಿ ಚತುರ್ದಶಿಯಂದು ನರಸಿಂಹ ಹವನ, ಪ್ರತಿ ಸೋಮವಾರ ಶ್ರೀ ಬ್ರಹ್ಮೇಶ ದೇವರಿಗೆ ವಿಶೇಷ ಪೂಜೆ ನಡೆಯಲಿದೆ. ಆಷಾಢ ಬಹುಳ ವಾಸದಲ್ಲಿ ಶ್ರೀರಾಮ ವೈಭವಂ 9 ದಿನಗಳ ಕಾಲ ರಾವಾಯಣ ಪಾರಾಯಣ, ಶ್ರೀರಾಮ ಜನ್ಮೋತ್ಸವ, ಶ್ರೀ ರಾಮ ಲಿಲೋತ್ಸವ, ಸೀತಾ ಸ್ವಯಂವರ, ಶ್ರೀರಾಮ ಪಟ್ಟಾಭಿಷೇಕ, ಶ್ರೀ ರಾಮ ಮೂಲ ಮಂತ್ರ ಹವನ, ಸುಂದರಕಾಂಡ ಪಾರಾಯಣ ಹಾಗೂ ಶ್ರೀರಾಮ ಪ್ರವಚನ, ಶ್ರೀರಾಮ ತಾರಕ ಮಂತ್ರ ಪಠಣ ನಡೆಯಲಿದೆ ಎಂದು ತಿಳಿಸಿದರು.
ಶ್ರಾವಣ ವಾಸದಲ್ಲಿ ವ್ಯಾಸ ವೈಭವಂ 7 ದಿನಗಳ ಕಾಲ ಶ್ರೀ ವ್ಯಾಸ ಜನ್ಮೋತ್ಸವ, ಚತುರ್ವೇದ ಪಾರಾಯಣ, ಭದ್ರಖಾ ಮಂಡಳಿ ಪೂಜಾ, ಪಾರಾಯಣ, ಪ್ರವಚನ ನಡೆಯಲಿದೆ. ಆಶ್ವೀಜ ವಾಸದಲ್ಲಿ ಶ್ರೀ ನರಸಿಂಹ ವೈಭವಂ 7 ದಿನಗಳ ಕಾಲ ಶ್ರೀ ನರಸಿಂಹ ಪಾತ್ರೋದ್ಭವ, ಶ್ರೀ ನರಸಿಂಹ ಮೂಲ ಮಂತ್ರ ಹವನ, ಶ್ರೀ ನರಸಿಂಹ ವೈಭವಂ, ಶ್ರೀ ನರಸಿಂಹ ಭದ್ರಖಾ ಮಂಡಳಿ ಪೂಜಾ ನರಸಿಂಹ ಸ್ತುತಿ ಹಾಗೂ ಪಠಣ ತತ್ಸಂಭದ ಕಾರ್ಯಕ್ರಮ ನಡೆಯಲಿದೆ. ವಿಶೇಷ ದಿನಗಳಲ್ಲಿ ಋಕ್ ಸಂಹಿತ ಯಾಗ, ದಶಮ ಸ್ಕಂದ ಹವನ, ಶಿವ ಪುರಾಣ, ಗಿರಿಜಾ ಕಲ್ಯಾಣ, ಭಾಗವತ ಸಪ್ತಾಹ, ವೆಂಕಟೇಶ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ನವಚಂಡಿಕಾ ಹೋಮ, ಪಂಚ ಸೂಕ್ತ ಹವನ, ಶ್ರೀ ಸೂಕ್ತ ಹವನ, ಧನ್ವಂತರಿ ಯಾಗ, ಋಕ್ಷಾತ್ರಯ ಹವನ, ಚಂಡಿಕಾ ಹವನ, ಸುದರ್ಶನ ಹೋಮ, ಭಾಗವತ ಪಾರಾಯಣ ನಡೆಯಲಿದೆ ಎಂದರು.
ಚಾತುರ್ವಾಸ್ಯ ಸಂದರ್ಭ ಶ್ರೀ ಸುಕೃತೀಂದ್ರ ತೀರ್ಥ ಸ್ವಾಮೀಜಿ ಪುಣ್ಯತಿಥಿ ಆರಾಧನಾ ಮಹೋತ್ಸವ, ಸಾನ್ನಿಧ್ಯ ಹವನ, ಶತಕಲಶಾಭಿಷೇಕ, ವರಮಹಾಲಕ್ಷ್ಮೀ ವ್ರತ, ಋಗುಪಾಕರ್ಮ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಶ್ರೀ ಅನಂತ ಚತುರ್ದಶಿ ವ್ರತ, ವಿಶೇಷ ಭಜನಾ ಸಪ್ತಾಹ, ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಜನ್ಮ ನಕ್ಷತ್ರ ಆಚರಣೆ, ನವರಾತ್ರಿ ಸಂದರ್ಭ 10 ದಿನಗಳ ಪರ್ಯಂತ ಶ್ರೀ ವೇದವ್ಯಾಸ ದೇವರಿಗೆ ವಿಶೇಷ ವಾಹನ ಪೂಜೆ, ಮಹಾನವಮಿ, ವಿಜಯ ದಶಮಿ ನರಕ ಚತುರ್ದಶಿ, ತೈಲಾಭ್ಯಂಜನ ತುಳಸಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.
ದಿನೇಶ್ ಕಾಮತ್ ಪ್ರಸ್ತಾವನೆಗೈದರು. ಶ್ರೀಧರ್ ಕಾಮತ್ ಶ್ರೀ ಕ್ಷೇತ್ರದ ವಾಹಿತಿ ನೀಡಿದರು. ಜಿಎಸ್‌ಬಿ ಸರ್ವ ದೇವಾಲಯಗಳ ಒಕ್ಕೂಟ, ಕುಂದಾಪುರ ವಲಯದ ಎಲ್ಲ ದೇವಳದ ಆಡಳಿತ ಮಂಡಳಿ, ಸರ್ವ ಸಂದ ಸದಸ್ಯರು ಹಾಗೂ ಭಜನಾ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದ್ದರು. ವಲಯ ಅಧ್ಯಕ್ಷ ಡಿ.ಗೋಪಾಲಕೃಷ್ಣ ಕಾಮತ್ ವಂದಿಸಿದರು.