ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದ ಪುಷ್ಕರಿಣಿ ಅಭಿವೃದ್ಧಿಗೆ ಕರ್ಣಾಟಕ ಬ್ಯಾಂಕ್‌ನಿಂದ 20 ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಲಾಯಿತು. ಮುಖ್ಯ ಪ್ರಬಂಧಕ ಲಕ್ಷ್ಮೀನಾರಾಯಣ, ರಾಕೋಡಿ ಈಶ್ವರ ಭಟ್ ಮೊದಲಾದವರಿದ್ದರು.  
ಉಡುಪಿ

ಕರ್ಣಾಟಕ ಬ್ಯಾಂಕ್‌ನಿಂದ ಸಾರ್ವಜನಿಕರಿಗೆ ನೆರವು

ಬಂಟ್ವಾಳ:

ಕರ್ಣಾಟಕ ಬ್ಯಾಂಕ್ ಸಿಎಸ್‌ಆರ್ ನಿಧಿಯಿಂದ ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸಗಳಿಗೆ ನೆರವು ನೀಡಲಾಗುತ್ತಿದೆ. ಜನರಿಂದ ಬಂದ ದುಡ್ಡನ್ನು ಜನರಿಗೋಸ್ಕರ ವಿನಿಯೋಗಿಸುತ್ತಿದ್ದೇವೆ. ಈ ವರ್ಷ ಗಮನಾರ್ಹ ಲಾಭ ಪಡೆದಿದ್ದು, ಬ್ಯಾಂಕ್ ಪ್ರಗತಿಯತ್ತ ಮುನ್ನಡೆದಿದೆ ಎಂದು ಕರ್ಣಾಟಕ ಬ್ಯಾಂಕ್ ಮಂಗಳೂರು ವಲಯದ ಮುಖ್ಯಸ್ಥ, ಮುಖ್ಯ ಪ್ರಬಂಧಕ ಲಕ್ಷ್ಮೀನಾರಾಯಣ ಹೇಳಿದರು.

ಕಲ್ಲಡ್ಕದ ಗೇರುಕಟ್ಟೆಯಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಅಧೀನದ ಶ್ರೀ ಉಮಾಶಿವ ಕ್ಷೇತ್ರದ ಪುಷ್ಕರಿಣಿಯ ಅಭಿವೃದ್ಧಿ ಕಾರ್ಯಕ್ಕೆ ಕರ್ಣಾಟಕ ಬ್ಯಾಂಕ್ ವತಿಯಿಂದ ನೀಡಲಾದ 20 ಲಕ್ಷ ರೂ. ನೆರವಿನ ಚೆಕ್ ಅನ್ನು ಶುಕ್ರವಾರ ಹಸ್ತಾಂತರಿಸಿ ಮಾತನಾಡಿದರು. ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಚೆಕ್ ಸ್ವೀಕರಿಸಿದರು.
ಬಿ.ಸಿ.ರೋಡ್ ಶಾಖೆ ಮ್ಯಾನೇಜರ್ ಭರತ್‌ರಾಜ್, ಕಲ್ಲಡ್ಕ ಹವ್ಯಕ ವಲಯ ಅಧ್ಯಕ್ಷ ರಮೇಶ್ ಭಟ್ ಮಾವೆ, ಪ್ರಮುಖರಾದ ಪುಳು ಈಶ್ವರ ಭಟ್, ಕೋಮಲೆ ಈಶ್ವರ ಭಟ್, ಕೋಮಲೆ ಕೃಷ್ಣ ಭಟ್, ಸತೀಶ ಪಂಜಿಗದ್ದೆ, ಬಾಲಕೃಷ್ಣ ಭಟ್ ಸಂಚಯಗಿರಿ, ಸೇವಾಸಮಿತಿ ಸದಸ್ಯರು, ಎಸ್.ಎನ್.ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು. ವಿಷ್ಣು ಸಹಸ್ರನಾಮ ಪಠಣ, ದುರ್ಗಾಪೂಜೆ ಸಂಪನ್ನಗೊಂಡಿತು.