ಪ್ರಗತಿ ವಿಶೇಷ ವಿಕಲಚೇತನ ಶಾಲೆಗೆ ಕೊಡಮಾಡಲಾದ ಶಾಲಾ ವಾಹನದ ಕೀಲಿಕೈ ಹಸ್ತಾಂತರಿಸಲಾಯಿತು. ಎಸ್.ಜೆ.ಪ್ರಸಾದ್, ಜಿ.ವಿಶ್ವನಾಥ್ ಮೊದಲಾದವರಿದ್ದರು.
ಕಾಸರಗೋಡು: ಉಳಿಯತ್ತಡ್ಕದ ಪ್ರಗತಿ ವಿಶೇಷ ವಿಕಲಚೇತನ ಶಾಲೆಗೆ ಕರ್ಣಾಟಕ ಬ್ಯಾಂಕಿನ ವತಿಯಿಂದ ಕೊಡುಗೆಯಾಗಿ ನೀಡಲಾದ ಶಾಲಾ ವಾಹನದ ಕೀಲಿಕೈ ಹಸ್ತಾಂತರಿಸಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಜೆ.ಪ್ರಸಾದ್ ಅವರಿಗೆ ಕರ್ಣಾಟಕ ಬ್ಯಾಂಕಿನ ಎ.ಜಿ.ಎಂ. ಜಿ.ವಿಶ್ವನಾಥ್ ವಾಹನದ ಕೀಲಿಕೈ ಹಸ್ತಾಂತರಿಸಿದರು. ಬ್ಯಾಂಕ್ ನಿವೃತ್ತ ಅಧಿಕಾರಿ ಎಂ.ಅಶೋಕ ರೈ ಅಧ್ಯಕ್ಷತೆ ವಹಿಸಿದ್ದರು.
ಬ್ಯಾಂಕ್ ನಿವೃತ್ತ ಪ್ರಬಂಧಕ ಅನಂತನ್, ರಬ್ಬರ್ ಬೋರ್ಡ್ ನಿವೃತ್ತ ಉಪ ಆಯುಕ್ತ ಬಾಲಕೃಷ್ಣ ಎಸ್, ಕರ್ಣಾಟಕ ಬ್ಯಾಂಕಿನ ಕಾಸರಗೋಡು ಶಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕ ಉದಯಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಚಿತ್ರಾ ವಂದಿಸಿದರು.