ಕಾರ್ಕಳ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವ ಸಿದ್ಧತೆಯ ಸವಾಲೋಚನಾ ಸಭೆ ಶನಿವಾರ ನಡೆಯಿತು. ಅಭಯಚಂದ್ರ ಜೈನ್, ಮಹಾವೀರ ಹೆಗ್ಡೆ, ಪುಷ್ಪರಾಜ್ ಜೈನ್, ಅನಂತ್ರಾಜ್ ಪೂವಣಿ, ಸಂಪತ್ ಸಾವ್ರಾಜ್ ಮತ್ತಿತರರು ಇದ್ದರು.
ಕಾರ್ಕಳ: ಮುಂದಿನ ವರ್ಷ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಕಾರ್ಕಳದ ಪ್ರಮುಖ ರಸ್ತೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ 70 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿದ್ದು, ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಜೈನಧರ್ಮ ಜೀರ್ಣೋದ್ಧಾರಕ ಸಂದ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುವಾರ್ ಹೇಳಿದರು.
ಕಾರ್ಕಳ ಜೈನ ಧರ್ಮ ಜೀರ್ಣೋದ್ಧಾರಕ ಸಂ ವತಿಯಿಂದ ಶನಿವಾರ ನಡೆದ ಕಾರ್ಕಳ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವ ಸಿದ್ಧತೆಯ ಸವಾಲೋಚನಾ ಸಭೆಯಲ್ಲಿ ಮಾತನಾಡಿದರು.
ಜೈನ ಮಠದ ಯಾತ್ರಿ ನಿವಾಸದ ದುರಸ್ತಿಗೆ 40 ಲಕ್ಷ ರೂ. ಅನುದಾನದ ಅಗತ್ಯವಿದೆ. ಮಸ್ತಕಾಭಿಷೇಕ ಮಹೋತ್ಸವದ ಯಶಸ್ಸಿಗೆ ಈಗಾಗಲೇ 36 ಸಮಿತಿ ರಚಿಸಲಾಗಿದೆ. ಮಹೋತ್ಸವ ಬಹಳ ಅದ್ದೂರಿಯಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು. ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸರ್ಕಾರದಿಂದ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದರು.
ವಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಅಂಡಾರು ಮಹಾವೀರ ಹೆಗ್ಡೆ, ಮಂಗಳೂರಿನ ಪುಷ್ಪರಾಜ್ ಜೈನ್, ಅನಂತ್ರಾಜ್ ಪೂವಣಿ, ಶಿರ್ತಾಡಿಯ ಸಂಪತ್ ಸಾವ್ರಾಜ್, ರತ್ನಾಕರ್ ರಾಜ್ ಅರಸು, ಶಿವಪ್ರಸಾದ್ ಅಜಿಲ, ಮಂಗಳೂರಿನ ಸುಧೀರ್ ಪಡಿವಾಳ್, ಕೆ.ಧರಣೇಂದ್ರ ಕುವಾರ್, ಧೀರಜ್ ಕುವಾರ್, ಜೀವಂದರ್ ಬಲ್ಲಾಳ್, ಬ್ರಹ್ಮದೇವ ಕಳಸ, ಅಜಿತ್ ಕೊಕ್ರಾಡಿ, ಮೋಹನ್ ಪಡಿವಾಳ, ಉಪಸ್ಥಿತರಿದ್ದರು.