ಕಾಪು ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಮಾತನಾಡಿದರು. ಹರಿಣಾಕ್ಷಿ ದೇವಾಡಿಗ, ಸರಿತಾ ಶಿವಾನಂದ, ಕಿರಣ್ ಆಳ್ವ ಇದ್ದರು. 
ಉಡುಪಿ

13 ಕೋಟಿ ರೂ. ಗಾತ್ರದ ಬಜೆಟ್ ಸಿದ್ಧ

ಇಂದಿರಾ ಎನ್ ಕೆ

ವಿಜಯವಾಣಿಸುದ್ದಿಜಾಲ ಪಡುಬಿದ್ರಿ

ಕಾಮಗಾರಿಗಳಬೇಡಿಕೆ,ಸಾರ್ವಜನಿಕರಅಭಿಪ್ರಾಯದಂತೆ ಮುಂದಿನ ಆರ್ಥಿಕವರ್ಷಕ್ಕೆ 13,09,17,985ರೂ.ಅಂದಾಜುವೆಚ್ಚದ ಬಜೆಟ್ ಸಿದ್ಧ ಪಡಿಸಲಾಗಿದೆಎಂದು ಕಾಪು ಪುರಸಭೆ ಮುಖ್ಯಾಧಿಕಾರಿನೀಲಕಂಠ ಮೇಸ್ತ ತಿಳಿಸಿದರು.

ಕಾಪುಪುರಸಭೆಯ ಇಂದಿರಾಗಾಂಧಿ ಸಭಾಂಗಣದಲ್ಲಿ ಬಜೆಟ್ ಕುರಿತವಿಶೇಷ ಸಾವಾನ್ಯ ಸಭೆಯಲ್ಲಿ ಮಾತನಾಡಿದರು.

ಬಜೆಟ್ಕುರಿತಂತೆ ಪುರಸಭಾ ಸದಸ್ಯರುಮತ್ತು ಸಾರ್ವಜನಿಕರ ಅಭಿಪ್ರಾಯಪಡೆಯಲಾಗಿದೆ.ಮೂಲಸೌಕರ್ಯಗಳಜೋಡಣೆಯೊಂದಿಗೆ ರಸ್ತೆ,ಚರಂಡಿ,ಬೀದಿದೀಪ,ಕಿಂಡಿಅಣೆಕಟ್ಟು ರಚನೆ ಮತ್ತು ನಿರ್ವಹಣೆಗೆಅನುದಾನದ ಲಭ್ಯತೆ ನೋಡಿಕೊಂಡುಕೆಲಸ ಮಾಡಲಾಗುವುದು.ಸದಸ್ಯರೆಲ್ಲರಸಹಕಾರದೊಂದಿಗೆ ಕಾಮಗಾರಿಗಳಸಮರ್ಪಕ ನಿರ್ವಹಣೆಗೆ ಆದ್ಯತೆನೀಡಲಾಗುವುದು ಎಂದು ಮುಖ್ಯಾಧಿಕಾರಿಹೇಳಿದರು.

ಬಜೆಟ್ಬಗ್ಗೆ ಸಮರ್ಪಕ ಮಾಹಿತಿ ಇಲ್ಲ

ಬಜೆಟ್ಸಭೆ ನಡೆಸುವ ಸಂದರ್ಭ ಸಮರ್ಪಕ ಮಾಹಿತಿ ಸಿಕ್ಕಿಲ್ಲ,ಒಂದೇದಿನಎರಡೆರಡು ಸಭೆ ಕರೆದಿದ್ದು ಒಂದುಸಭೆ ರದ್ದಾದ ಪರಿಣಾಮ ಕೆಲವರಿಗೆತಪ್ಪು ಮಾಹಿತಿ ರವಾನೆಯಾಗಿಸಭೆಯಲ್ಲಿ ಪಾಲ್ಗೊಳ್ಳಲುಸಾಧ್ಯವಾಗಿಲ್ಲ.ಹಾಗಾಗಿನಮ್ಮ ವಾರ್ಡ್‌ಗಳಲ್ಲಿನ ಕಾಮಗಾರಿಪಟ್ಟಿ ನೀಡಲು ಬಾಕಿಯಿದೆ ಎಂದುಕೆಲವು ಸದಸ್ಯರು ಸಭೆ ಗಮನಕ್ಕೆತಂದರು.ಇದಕ್ಕೆಸ್ಪಂದಿಸಿದ ಮುಖ್ಯಾಧಿಕಾರಿ,ಕಾಮಗಾರಿಪಟ್ಟಿ ನೀಡದಿರುವ ಸದಸ್ಯರು ತಮ್ಮವಾರ್ಡ್‌ಗಳಲ್ಲಿ ನಡೆಯಬೇಕಿರುವಕಾಮಗಾರಿಗಳ ಪಟ್ಟಿಯನ್ನು ಶ್ರೀನೀಡಿದಲ್ಲಿ ಅನುದಾನದ ಲಭ್ಯತೆನೋಡಿಕೊಂಡು,ಚರ್ಚಿಸಿಕಾಮಗಾರಿ ನಿರ್ವಹಣೆಗೆ ಕ್ರಮವಹಿಸಲಾಗುವುದು ಎಂದರು.

ಪುರಸಭೆಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ,ಉಪಾಧ್ಯಕ್ಷೆಸರಿತಾ ಶಿವಾನಂದ,ಸ್ಥಾಯಿಸಮಿತಿ ಅಧ್ಯಕ್ಷ ಕಿರಣ್ ಆಳ್ವಹಾಗೂ ಸದಸ್ಯರು ಉಪಸ್ಥಿತರಿದ್ದರು.

ವಾರ್ಡ್‌ಗಳಲ್ಲಿನೀರಿನ ಸಮಸ್ಯೆ

ಪುರಸಭೆವ್ಯಾಪ್ತಿಯ ಹೆಚ್ಚಿನ ವಾರ್ಡ್‌ಗಳಲ್ಲಿಕುಡಿಯುವ ನೀರಿನ ಸಮಸ್ಯೆ ಜನವರಿಯಲ್ಲಿಯೇಉಂಟಾಗುತ್ತಿದೆ.ಈಬಗ್ಗೆ ಚರ್ಚಿಸಲು ವಿಶೇಷ ಸಭೆಕರೆಯಬೇಕೆಂದು ಸದಸ್ಯರು ಒತ್ತಾಯಿಸಿದರು.ಈಹಿಂದೆ ಸದಸ್ಯರ ಒತ್ತಾಯದಂತೆಜಲಮಂಡಳಿ ಸಭೆ ಕರೆಯಲಾಗಿದ್ದರೂ,ಕೆಲಕಾರಣಗಳಿಂದ ಅದು ರದ್ದಾಗಿತ್ತು.ಈಬಗ್ಗೆ ಸದಸ್ಯರು ಆಕ್ಷೇಪವ್ಯಕ್ತಪಡಿಸಿದರು.ಮತ್ತೊಮ್ಮೆದಿನ ನಿಗದಿಪಡಿಸಿ,ಶಾಸಕರಉಪಸ್ಥಿತಿಯಲ್ಲಿ ಅತೀ ಶ್ರೀದಲ್ಲಿವಿಶೇಷ ಸಭೆ ನಡೆಸಿ ಪರಿಹಾರಕಂಡುಕೊಳ್ಳಲು ಪ್ರಯತ್ನಿಸುವುದಾಗಿಭರವಸೆ ನೀಡಿದರು.

ಸಮಯಕ್ಕೆಮಹತ್ವ ನೀಡಿ ಕೆಲಸ ನಿರ್ವಹಿಸಿ

ಪುರಸಭೆಸಿಬ್ಬಂದಿ ಕಚೇರಿ ಕೆಲಸಕ್ಕೆತಡವಾಗಿ ಬರುವ ಬಗ್ಗೆ ಆಕ್ಷೇಪವ್ಯಕ್ತವಾಗಿದ್ದು ಈ ಬಗ್ಗೆಸಿಬ್ಬಂದಿ ಜತೆ ಮಾತುಕತೆ ನಡೆಸಲಾಗಿದೆ.ಸರ್ಕಾರದನಿರ್ದೇಶನದಂತೆ ಸಮಯಕ್ಕೆ ಸರಿಯಾಗಿಬಂದು,ಸಮಯಕ್ಕೆಸರಿಯಾಗಿ ನಿರ್ಗಮಿಸುವಂತೆಸೂಚಿಸಲಾಗಿದೆ.ಇದಕ್ಕಾಗಿವಾರ್ಗಸೂಚಿ, ಮಾನದಂಡಮತ್ತು ನಿರ್ದೇಶನ ನೀಡಲಾಗಿದೆ.ಮುಂದೆಇಂತಹ ಸಮಸ್ಯೆ ಎದುರಾಗದಂತೆನೋಡಿಕೊಳ್ಳಲಾಗುವುದು ಎಂದುಮುಖ್ಯಾಧಿಕಾರಿ ನೀಲಕಂಠ ಭರವಸೆನೀಡಿದರು.