ಉಡುಪಿಯ ಇಂದ್ರಾಳಿಯಲ್ಲಿ ಕೆಟಿಎಸ್ಎಂ ವತಿಯಿಂದ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಬಿ. ರಾಜಾರಾಂ ಭಟ್ ಶಿಬಿರದ ಸಂಚಿಕೆ ಬಿಡುಗಡೆ ಮಾಡಿದರು. ವೈ.ಸೂರಜ್ ಕುಮಾರ್, ಸುಬ್ರಹ್ಮಣ್ಯ ಭಟ್, ವಿದ್ಯಾವಂತ ಆಚಾರ್ಯ, ಸುಬ್ರಹ್ಮಣ್ಯ ಬಾಸ್ರಿ, ಶ್ರಾವ್ಯಾ ಎಸ್. ಬಾಸ್ರಿ ಇದ್ದರು.
* ಸುಬ್ರಹ್ಮಣ್ಯ ಭಟ್ (ಸು.ಜಿ. ಕುರ್ಯ) ಆಶಯ
* ಕೆಟಿಎಸ್ಎಂ ಕಲಾ ಕೌಶಲ ಬೇಸಿಗೆ ಶಿಬಿರ ಉದ್ಘಾಟನೆ
ಉಡುಪಿ: ಪದವಿ ಮುಗಿಸಿದ ಶೇ.75ರಷ್ಟು ವಿದ್ಯಾರ್ಥಿಗಳಲ್ಲಿ ಕೌಶಲಗಳ ಕೊರತೆಯಿದ್ದು ಅವರೆಲ್ಲ ಬಹುತೇಕ ನಿರುದ್ಯೋಗಿಗಳಾಗಿದ್ದಾರೆ. ಮಕ್ಕಳು ಶಾಲಾ ತರಗತಿ, ಮನೆಯ ಕೋಣೆಗೆ ಸೀಮಿತವಾಗದೆ ಪ್ರಕೃತಿ ಜತೆ ಬೆರೆಯಬೇಕು, ನೋಡಬೇಕು, ಕಲಿಯಬೇಕು. ಅಂಕ ಗಳಿಕೆಯ ಪಠ್ಯ ಕಲಿಕೆಗೆ ಸೀಮಿತವಾಗದೆ ಕಲೆ, ಸಂಸ್ಕೃತಿ, ಸಂಸ್ಕಾರ ಅಳವಡಿಸಿಕೊಂಡು ಸಮಾಜಕ್ಕೆ ಸ್ಪಂದಿಸುವ ಮಾನವೀಯ ಗುಣ ಹೊಂದಬೇಕು ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ (ಸು.ಜಿ. ಕುರ್ಯ) ಸಲಹೆ ನೀಡಿದರು.
ಉಡುಪಿ ಇಂದ್ರಾಳಿಯ ಕಲಾ ತಪಸ್ ಸ್ಕೂಲ್ ಆಫ್ ಮ್ಯೂಸಿಕ್ (ಕೆಟಿಎಸ್ಎಂ) ವತಿಯಿಂದ ಕುಂಜಿಬೆಟ್ಟು ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ನ ಗೀತಾಂಜಲಿ ಸಭಾಂಗಣದಲ್ಲಿ 10 ದಿನಗಳ ಕಾಲ ಆಯೋಜಿಸಿದ್ದ 'ಕಲಾ ಕೌಶಲ-2026 (ಪ್ರತಿಭೆಗಳ ಪೋಷಣೆ, ಕೌಶಲ ಪ್ರೇರಣೆ, ಕಲಾ ಸಂಭ್ರಮಾಚರಣೆ) ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ನ ನಿರ್ದೇಶಕ ವಿದ್ಯಾವಂತ ಆಚಾರ್ಯ ಶಿಬಿರ ಉದ್ಘಾಟಿಸಿ, ಶುಭ ಹಾರೈಸಿದರು. ರೋಟರಿ ಜಿಲ್ಲೆ 3182ರ ಮಾಜಿ ಗವರ್ನರ್ ಬಿ. ರಾಜಾರಾಂ ಭಟ್ ಶಿಬಿರದ ಸಂಚಿಕೆ ಬಿಡುಗಡೆ ಮಾಡಿದರು. ರೋಟರಿ ಉಡುಪಿಯ ಅಧ್ಯಕ್ಷ ವೈ.ಸೂರಜ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕೆಟಿಎಸ್ಎಂ ಪೋಷಕ ಸುಬ್ರಹ್ಮಣ್ಯ ಬಾಸ್ರಿ ಸ್ವಾಗತಿಸಿದರು. ಕೆಟಿಎಸ್ಎಂ ನಿರ್ದೇಶಕಿ ಶ್ರಾವ್ಯಾ ಎಸ್. ಬಾಸ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಟಿಎಸ್ಎಂ ನಿರ್ದೇಶಕ ಶ್ರವಣ್ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು.