ಶ್ರೀ ನಾರಾಯಣ ಗುರು 'ರಾಜ್ಯ ಗುರುಧರ್ಮ ಪ್ರಚಾರ' ಯುವಜನ ಸಭಾದ ಅಧ್ಯಕ್ಷರಾಗಿ ನೇಮಕಗೊಂಡ ಕೆ.ಗೋಪಿ ಕೃಷ್ಣಪ್ಪ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಕೇರಳದಲ್ಲಿ ಆದೇಶ ಪ್ರತಿ ನೀಡಿದರು. ಕೆ.ಸಿ. ವೇಣುಗೋಪಾಲ್ ಇತರರು ಇದ್ದರು.
* ಶ್ರೀ ನಾರಾಯಣ ಗುರು 'ರಾಜ್ಯ ಗುರುಧರ್ಮ ಪ್ರಚಾರ' ಯುವಜನ ಸಭಾ
ಉಡುಪಿ: ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಕೇರಳದ ಶಿವಗಿರಿ ಮಠದ ಅಂಗ ಸಂಘಟನೆಯಾಗಿರುವ 'ಗುರುಧರ್ಮ ಪ್ರಚಾರ ಸಭಾ'ದ ಕರ್ನಾಟಕ ರಾಜ್ಯದ ಯುವಜನ ಘಟಕದ ಅಧ್ಯಕ್ಷರನ್ನಾಗಿ ಉಡುಪಿಯ ಕೆ.ಗೋಪಿ ಕೃಷ್ಣಪ್ಪ ಅವರನ್ನು ನೇಮಕ ಮಾಡಲಾಗಿದೆ.
ಶಿವಗಿರಿ ಮಠದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಹೊರಡಿಸಿರುವ ನೇಮಕ ಆದೇಶದ ಪ್ರತಿಯನ್ನು ಕೇರಳ ರಾಜ್ಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕೆ.ಗೋಪಿ ಅವರಿಗೆ ಡಿ.31ರಂದು ಹಸ್ತಾಂತರಿಸಿದರು.
ಐದು ಎಕರೆ ಜಾಗ ಘೋಷಣೆ
ಶ್ರೀ ನಾರಾಯಣ ಗುರುಗಳ ಚಿಂತನೆ ಹಾಗೂ ಆದರ್ಶಗಳನ್ನು ಜಾಗೃತಿ ಮೂಡಿಸಲು 'ಧರ್ಮಗುರು ಪ್ರಚಾರ ಸಭಾ' ಕ್ರಿಯಾಶೀಲವಾಗಿ ಚಟುವಟಿಕೆ ನಡೆಸುತ್ತಿದೆ. ಶಿವಗಿರಿಯ ಶಾಖಾ ಮಠದ ಸ್ಥಾಪನೆಗಾಗಿ ಮಂಗಳೂರಿನಲ್ಲಿ ಐದು ಎಕರೆ ಭೂಮಿ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ. ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಗುರು -ಗಾಂಧಿ ಶತಮಾನೋತ್ಸವ ಕಾರ್ಯಕ್ರಮದ ಆಯೋಜನೆಯ ಸಂಚಾಲಕರಾಗಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಕೆ.ಗೋಪಿ ಅವರನ್ನು ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.