ಹಿರೇಬೆಟ್ಟು ಭಟ್ರಕೋಡಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ನ್ಯಾಯಾಧೀಶ ಎಂ.ನ್ಯಾ.ಪುರುಷೋತ್ತಮ್ ಶಿಲಾನ್ಯಾಸ ನೆರವೇರಿಸಿದರು. ಡಾ. ಸತ್ಯ ಕೃಷ್ಣ ಭಟ್, ಶ್ರೀನಿಧಿ ಹೆಗ್ಡೆ, ಪ್ರಕಾಶ್ ನಾಯಕ್, ಚಂದ್ರಶೇಖರ್ ನಾಯಕ್, ಜಯಪ್ರಕಾಶ್ ನಾಯಕ್, ಶಂಕರ್ ನಾಯಕ್, ಸುಂದರ್ ಮೂಲ್ಯ ಇತರರಿದ್ದರು.
* ಹಿರೇಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯ
ಉಡುಪಿ: ತಾಲೂಕಿನ ಹಿರಿಯಡ್ಕ ಸಮೀಪದ ಹಿರೇಬೆಟ್ಟು ಭಟ್ರಕೋಡಿ ಗ್ರಾಮ ದೇವರಾದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗಿದ್ದು, ಶಿಲಾಮಯ ಗರ್ಭಗೃಹದ ನಿರ್ಮಾಣಕ್ಕೆ ಬಳಸುವ ನೂತನ ಶಿಲೆಗಳಿಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಂ ಎಂ.ಪುರುಷೋತ್ತಮ್ ಅವರು ಬುಧವಾರ (ಜೂ.24) ಪ್ರಥಮ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಶ್ರೀ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ಮಂಗಳೂರು ನೇತೃತ್ವದಲ್ಲಿ ನ್ಯಾಯಾಧೀಶರೇ ಶಿಲಾನ್ಯಾಸದ ಶಿಲೆಗಳಿಗೆ ಅರಿಶಿನ, ಕುಂಕುಮ, ಹಾಲು, ಹೂ ಸಮರ್ಪಿಸಿ ಆರತಿ ಬೆಳಗಿ ಶುಭಹಾರೈಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಕೀಲ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯಕ್, ಖಜಾಂಚಿ ಚಂದ್ರಶೇಖರ್ ನಾಯಕ್, ಅರ್ಚಕ ಸೀತಾರಾಮ್ ಭಟ್ ಉಪಸ್ಥಿತರಿದ್ದರು.
ಗ್ರಾಮದ ಪ್ರಮುಖರಾದ ಜಯಪ್ರಕಾಶ್ ನಾಯಕ್, ಶಂಕರ್ ನಾಯಕ್, ಸುಂದರ್ ಮೂಲ್ಯ, ನಾರಾಯಣ ಪೂಜಾರಿ, ಚಂದ್ರಯ್ಯ ಆಚಾರ್ಯ, ಪುರಂದರ ಆಚಾರ್ಯ, ರಮೇಶ್ ನಾಯಕ್, ಗುರುನಂದನ್ ನಾಯಕ್, ಗುರುದಾಸ್ ಭಂಡಾರಿ, ಸುಧೀರ್ ಶೆಟ್ಟಿ, ಶ್ಯಾಮ್ ನಾಯ್ಕ್, ಸುರೇಶ್ ನಾಯ್ಕ್, ಶೈಲೇಶ್ ಪೂಜಾರಿ, ಗುರುರಾಜ್ ಆಚಾರ್ಯ, ಶಶೀಂದ್ರ ಪೂಜಾರಿ, ದಿನೇಶ್ ಪ್ರಭು, ಡಾ.ಕೃಷ್ಣಮೂರ್ತಿ, ಕೇಶವ್ ಭಂಡಾರಿ, ಗೋಪಾಲ್ ನಾಯಕ್, ಕೇಶವ್ ನಾಯಕ್, ನಂದಕುಮಾರ್, ಮಹದೇವ್ ಭಟ್, ಮುರುಳೀಧರ್ ಎಲ್., ವಸಂತ್ ನಾಯಕ್, ಸುರೇಶ್ ಭಟ್ ಇತರರು ಪಾಲ್ಗೊಂಡಿದ್ದರು.