ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಯ್ಯಾರಿನ ಮನೆಯೊಂದರಲ್ಲಿ ಚಿನ್ನಾಭರಣಗಳು ಕಳವಾಗಿರುವ ಘಟನೆ ನಡೆದಿದೆ. ಪೈವಳಿಕೆ ಪಂಚಾಯಿತಿ ಕಯ್ಯಾರು ನಿವಾಸಿ ಪಾಲಕ್ಕಾಡ್ನಲ್ಲಿ ಹೋಟೆಲ್ ವ್ಯಾಪಾರಿ ಯೂಸಫ್ ಎಂಬುವರ ಮನೆಯಿಂದ ಐದು ಪವನ್ ಚಿನ್ನ ಕಳವಾಗಿದೆ.
ಯೂಸಫ್ ಭಾನುವಾರ ಪತ್ನಿ ಹಾಗೂ ಮಕ್ಕಳ ಜತೆಗೆ ಮಸೀದಿಯ ಸ್ವಲಾತ್ ಪ್ರಾರ್ಥನೆಗೆ ತೆರಳಿದ್ದು, ರಾತ್ರಿ 8.30ಕ್ಕೆ ವಾಪಸ್ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಟೆರಸ್‌ನ ಮೇಲೆ ಏರಿದ ಕಳ್ಳರು ಏಣಿ ಮೂಲಕ ಇಳಿದು ಕೊಠಡಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಕೋಣೆಯಲ್ಲಿದ್ದ ಕೀಲಿಕೈನಿಂದ ಕಪಾಟುಗಳನ್ನು ತೆರೆದು ಚಿನ್ನಾಭರಣ ದೋಚಿದ್ದಾರೆ. ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲಿಸಿದರು.