ಉಡುಪಿಯಲ್ಲಿ ಆಯೋಜಿಸಿದ್ದ ಜೀವನ ವಿದ್ಯಾ ಶಿಬಿರವನ್ನು ಸುಗುಣೇಂದ್ರ ಶ್ರೀ ಉದ್ಘಾಟಿಸಿದರು. ಡಾ. ಎಚ್​.ಎಸ್​. ಬಲ್ಲಾಳ್​, ಯಶ್​ಪಾಲ್​ ಸುವರ್ಣ, ಎಂ.ಗಂಗಾಧರ ರಾವ್​, ಎಸ್​. ವೆಂಕಟೇಶ್​, ನಂದಾ ವೆಂಕಟೇಶ್​, ಸಿ.ವಿ. ಸಂತೋಷ್​, ಭಾಸ್ಕರ್​ ಭಟ್​, ಸಿ.ಎಸ್​. ರಾವ್​, ಮುರಳಿ ಕಡೆಕಾರ್​, ಗುರುದತ್​ ಬಂಟ್ವಾಳಕರ್​ ಇದ್ದರು. 
ಉಡುಪಿ

ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆಯೂ ಅಗತ್ಯ

* ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

* ಜೀವನ ವಿದ್ಯಾ ಶೈಕ್ಷಣಿಕ ಶಿಬಿರ ಉದ್ಘಾಟನೆ

ಉಡುಪಿ: ಯಾಂತ್ರೀಕೃತ ಜಗತ್ತಿನಲ್ಲಿ ದಾಂಗುಡಿ ಇಡುತ್ತಿರುವ ಜನರಿಗೆ ದೇವರ ಸ್ಮರಣೆ, ಪೂಜೆಗೂ ಸಮಯ ಇಲ್ಲದಾಗಿದೆ. ವಿಶ್ವವೇ ಇಂದು ಒತ್ತಡ, ಯುದ್ಧಾತಂಕದಿಂದ ಕೂಡಿದೆ. ಜಗದಲ್ಲಿ ಸದಾ ಶಾಂತಿ ನೆಲೆಸಲು, ಕಾಡುವ ಎಲ್ಲ ಬಗೆಯ ಸಮಸ್ಯೆ ನಿವಾರಣೆಯಾಗಲು ಶ್ರೇಷ್ಠ ಗ್ರಂಥ ಭಗವದ್ಗೀತೆಯಿಂದ ಸಾಧ್ಯವಿದೆ. ಮಕ್ಕಳು ಲೌಕಿಕ ವಿದ್ಯೆಯೊಂದಿಗೆ ಮನ;ಶಾಂತಿ ಪಡೆಯಲು ಆಧ್ಯಾತ್ಮಿಕವಾಗಿ ಬೆಳೆಯುವದೂ ಅಷ್ಟೇ ಮುಖ್ಯ ಎಂದು ಯತಿಕುಲ ಚಕ್ರವರ್ತಿ, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಐವೈಸಿ ಸಭಾಣಗಣದಲ್ಲಿ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾದ ವಿದ್ಯಾಪೋಷಕ್​ ವತಿಯಿಂದ ಮಂಗಳವಾರ (ಫೆ.24) ಆಯೋಜಿಸಿದ್ದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಐದು ದಿನಗಳ ಕಾಲ ಹಮ್ಮಿಕೊಂಡಿರುವ 'ಜೀವನ ವಿದ್ಯಾ' ಶೈಕ್ಷಣಿಕ ಶಿಬಿರ ಉದ್ಘಾಟಿಸಿ, ಗೀತಾಲೇಖನ ಬರೆದು ಒಪ್ಪಿಸಿದವರಿಗೆ ಪ್ರಮಾಣ ಪತ್ರ ವಿತರಿಸಿ ಆಶೀರ್ವಚನ ನೀಡಿದರು.

ಆರೋಗ್ಯ ಕಾರ್ಡ್​ ವಿತರಣೆ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವತಿಯಿಂದ ವಿದ್ಯಾಪೋಷಕ್​ನ 1 ಸಾವಿರ ವಿದ್ಯಾರ್ಥಿಗಳಿಗಾಗಿ ಕೊಡಮಾಡಿದ ಆರೋಗ್ಯ ಉಚಿತ ಕಾರ್ಡ್​ಅನ್ನು ಮಾಹೆಯ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಸಾಂಕೇತಿಕವಾಗಿ ವಿತರಿಸಿದರು. ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ಶುಭಾಶಂಸನೆಗೈದರು. ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಎಸ್​. ವೆಂಕಟೇಶ್​ ಬೆಂಗಳೂರು, ನಂದಾ ವೆಂಕಟೇಶ್​, ಸಿ.ವಿ. ಸಂತೋಷ್​, ಭಾಸ್ಕರ್​ ಭಟ್​, ಸಿ.ಎಸ್​. ರಾವ್​, ಪಿ. ಸತೀಶ್​ ರಾವ್​, ಶಿಬಿರದ ನಿರ್ದೇಶಕ ಗುರುದತ್​ ಬಂಟ್ವಾಳಕರ್​, ಸಹನಾ ಕಿಣಿ ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಎಸ್​.ವಿ. ಭಟ್​, ವಿ.ಜಿ. ಶೆಟ್ಟಿ, ವಿದ್ಯಾಪ್ರಸಾದ್​, ಯು.ಎಸ್​. ರಾಜಗೋಪಾಲ್​ ಆಚಾರ್ಯ, ಅನಂತರಾಜ್​ ಉಪಾಧ್ಯ, ಅಶೋಕ ಎಂ., ಅಜಿತ್​ ಕುಮಾರ್​, ಮಂಜುನಾಥ್​ ಹೆಬ್ಬಾರ್​, ಆನಂದ ಶೆಟ್ಟಿ, ಎನ್​.ರಾಮ ಭಟ್​, ಪ್ರಭಾಕರ್​ ಬಂಡಿ ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್​ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್​ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.
"

ಮಂಗಳೂರಿನ ಪ್ರೊಟೊ ಅಪ್​ ಸ್ಕಿಲ್​ನ ನಿರ್ದೇಶನದಲ್ಲಿ ನಡೆಯಲಿರುವ ಐದು ದಿನಗಳ ಸನಿವಾಸ ಶಿಬಿರದಲ್ಲಿ ಪ್ರಥಮ ಪಿಯು ಮುಗಿಸಿದ ವಿದ್ಯಾಪೋಷಕ್​ನ 250 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಶಿಬಿರಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಜೀವನ ಕೌಶಲ, ಆಂಗ್ಲಭಾಷಾ ಪ್ರೌಢಿಮೆ ಬೆಳೆಸಿ ಅವರಿಗೆ ಸಾಧಕರ ಪರಿಚಯದೊಂದಿಗೆ ಜೀವನ ಮೌಲ್ಯ ಕಲಿಸಲಾಗುವುದು.