ಹಾಲಾಡಿ-ವಾರಾಹಿ ಜೆಸಿಐ ನೂತನ ಘಟಕವನ್ನು ನಿವೃತ್ತ ಬ್ಯಾಂಕ್ ಉದ್ಯೋಗಿ ಬಿ.ಮಂಜುನಾಥ ಕಾಮತ್ ಉದ್ಘಾಟಿಸಿದರು. ಸಂತೋಷ ಶೆಟ್ಟಿ, ಪ್ರದೀಪ ಶೆಟ್ಟಿ ಇದ್ದರು. 
ಉಡುಪಿ

ಜೆಸಿಐ ಹಾಲಾಡಿ-ವಾರಾಹಿ ಘಟಕ ಉದ್ಘಾಟನೆ

ಇಂದಿರಾ ಎನ್ ಕೆ
ಜನ್ನಾಡಿ: ಜೆಸಿಐ ಸಂಸ್ಥೆಯ ಶಂಕರನಾರಾಯಣ ಘಟಕ ಪ್ರವರ್ತಿತ ಹಾಲಾಡಿ-ವಾರಾಹಿ ನೂತನ ಘಟಕವನ್ನು ಗುರುವಾರ ಹಾಲಾಡಿಯಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಬಿ.ಮಂಜುನಾಥ ಕಾಮತ್ ಉದ್ಘಾಟಿಸಿದರು.
ಜೆಸಿಐ ವಲಯಾಧ್ಯಕ್ಷ ಸಂತೋಷ ಶೆಟ್ಟಿ, ಪೂರ್ವ ವಲಯ ಉಪಾಧ್ಯಕ್ಷ ಪ್ರದೀಪ ಶೆಟ್ಟಿ, ದುರ್ಗಾನುಗ್ರಹ ಸಭಾಂಗಣದ ಮಾಲೀಕರಾದ ನಾಗರಾಜ ಅಡಿಗ, ಶಂಕರನಾರಾಯಣ ಜೆಸಿಐ ಘಟಕ ಅಧ್ಯಕ್ಷ ಪ್ರವೀಣ ಬಾಳೆಕೊಡ್ಲು ಉಪಸ್ಥಿತರಿದ್ದರು.
ಪದಗ್ರಹಣ: ಹಾಲಾಡಿ-ವಾರಾಹಿ ಜೆಸಿಐ ಘಟಕ ನೂತನ ಅಧ್ಯಕ್ಷರಾಗಿ ಪ್ರದೀಪ ಹಾಲಾಡಿ, ಕಾರ್ಯದರ್ಶಿಯಾಗಿ ಅಶೋಕ ಆಚಾರ್ಯ, ಖಜಾಂಚಿಯಾಗಿ ಮಹೇಶ ಕುದ್ರುಬೆಟ್ಟು, ಮಹಿಳಾ ಘಟಕ ಅಧ್ಯಕ್ಷೆಯಾಗಿ ಅವಶ್ಯಾ ಶೆಟ್ಟಿ, ಜೂನಿಯರ್ ಜೆಸಿಐ ಅಧ್ಯಕ್ಷರಾಗಿ ವಿಶ್ವನಾಥ ಡಿ. ಆಯ್ಕೆಯಾದರು. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರವೀಣ ಬಾಳೆಕೊಡ್ಲು ಸ್ವಾಗತಿಸಿದರು. ಅಶೋಕ ಆಚಾರ್ಯ ವಂದಿಸಿದರು.