ಬ್ರಹ್ಮಾವರದಲ್ಲಿ ಹಲಸು ಮತ್ತು ಹಣ್ಣು ಮೇಳ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಸತೀಶ್ ಶೆಟ್ಟಿ, ಕಿಶೋರಿ ಶೆಟ್ಟಿ, ಸುಧೀರ್ ಕಾಮತ್, ಡಾ.ರೇವಣ್ಣ, ಬಿರ್ತಿ ರಾಜೇಶ್ ಶೆಟ್ಟಿ ಮತ್ತಿತರರಿದ್ದರು. 
ಉಡುಪಿ

ಹಲಸಿನ ಹಣ್ಣಲ್ಲಿದೆ ಹಲವಾರು ಔಷಧೀಯ ಗುಣ

ಬ್ರಹ್ಮಾವರ: ಕಾಡು ಬೆಳೆ ಎಂದು ಗುರುತಿಸಿಕೊಂಡ ಹಲಸಿನ ಹಣ್ಣು ಇಂದಿಗೂ ಯಾವುದೇ ರಾಸಾಯನಿಕ ಕಲಬೆರೆಕೆ ಇಲ್ಲದೆ ನೈಜರುಚಿ ನೀಡುತ್ತಿದ್ದು, ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಹಲಸಿನ ಹಲವಾರು ಖಾದ್ಯಗಳು ಇಂತಹ ಮೇಳದಿಂದ ಪರಿಚಯವಾಗಿವೆ ಎಂದು ವಕೀಲ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು.
ಬ್ರಹ್ಮಾವರ ಬಾರಕೂರು ರೋಟರಿ ಕ್ಲಬ್, ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಎಸ್‌ಎಂಎಸ್ ಸಮುದಾಯ ಭವನದಲ್ಲಿ ಶುಕ್ರವಾರ ಆರಂಭಗೊಂಡ ಹಲಸು ಮತ್ತು ಹಣ್ಣು ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಹ್ಮಾವರ ರೋಟರಿ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಾರಕೂರು ರೋಟರಿ ಅಧ್ಯಕ್ಷೆ ಕಿಶೋರಿ ಶೆಟ್ಟಿ, ಕೃಷಿ ವಿಜ್ಞಾನ ಕೇಂದ್ರದ ಸುಧೀರ್ ಕಾಮತ್, ಡಾ.ರೇವಣ್ಣ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ಉದ್ಯಮಿ ಹರೀಶ್ ಕುಂದರ್, ಎಸ್‌ಎಂಎಸ್ ಸಮುದಾಯ ಭವನದ ಟ್ರಸ್ಟಿ ಲುಕಾಸ್ ಡಯಾಸ್, ರೋಟರಿ ಕಾರ್ಯದರ್ಶಿಗಳಾದ ಸುದರ್ಶನ ಉಡುಪ, ರೆಕ್ಸಿನ್ ಉಪಸ್ಥಿತರಿದ್ದರು.
ಕುಸುಮಾ ಶೆಟ್ಟಿ ಮತ್ತು ಜಯಂತಿ ಪ್ರಾರ್ಥಿಸಿದರು. ಕೃಷಿ ವಿಜ್ಞಾನಿ ಡಾ.ಧನಂಜಯ್ ಸ್ವಾಗತಿಸಿದರು. ಆಲ್ವಿನ ಅಂದ್ರಾದೆ ನಿರೂಪಿಸಿದರು. ಗಣೇಶ್ ಶೆಟ್ಟಿ ವಂದಿಸಿದರು.