ಶ್ರೀ ಕ್ಷೇತ್ರ ಪೆರಾರದಲ್ಲಿ ವನಮಹೋತ್ಸವ, ಸಸಿ ವಿತರಣಾ ಸಮಾರಂಭವನ್ನು ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟಿಸಿದರು. ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಮುಖಂಡರಾದ ಸೋಹನ್ ಅತಿಕಾರಿ, ಸುಕುಮಾರ್ ದೇವಾಡಿಗ ಮತ್ತಿತರರಿದ್ದರು.
ಗುರುಪುರ: ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ. ಸರ್ಕಾರ ತಪ್ಪು ಮಾಡಿದಲ್ಲಿ, ತಪ್ಪು ಸರಿಪಡಿಸುವವರೆಗೆ ಹೋರಾಟ ನಡೆಸುವುದು ನಮ್ಮ ಕರ್ತವ್ಯ. ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳು ಸಕಾಲದಲ್ಲಿ ಲಭ್ಯವಾಗದೆ ಹೋದಲ್ಲಿ ರೈತರು ನಡೆಸುವ ಹೋರಾಟಕ್ಕೆ ಶಾಸಕನಾಗಿ ಸಂಪೂರ್ಣ ಬೆಂಬಲ ನೀಡುವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ರೈತ ಮೋರ್ಚಾ ಆಶ್ರಯ, ಬಿಜೆಪಿ ಮಂಗಳೂರು ಉತ್ತರ ಮಂಡಲ ಸಹಭಾಗಿತ್ವದಲ್ಲಿ ಭಾನುವಾರ ಶ್ರೀ ಕ್ಷೇತ್ರ ಪೆರಾರದಲ್ಲಿ ವನಮಹೋತ್ಸವ, ಸಸಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು, ಪೆರಾರ ಶ್ರೀ ಬಲವಾಂಡಿ ಕ್ಷೇತ್ರದ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಪೆರಾರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಮೋಹನದಾಸ್ ರೈ ಮುಂಡಬೆಟ್ಟುಗುತ್ತು, ಉತ್ತರ ಮಂಡಲ ರೈತ ಮೋರ್ಚಾ ಪ್ರಭಾರಿ ಮೋಹನದಾಸ ಶೆಟ್ಟಿ ಬೆಳ್ಮ, ಉತ್ತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಸುಕೇಶ್ ಮಾಣೈ, ಎಡಪದವು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಮಹಾಬಲ ಸಾಲ್ಯಾನ್, ಗುರುಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶೋಧನ್ ಆದ್ಯಪಾಡಿ, ಉತ್ತರ ಮಂಡಲ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಕುಮಾರ್ ದೇವಾಡಿಗ, ಉಪಾಧ್ಯಕ್ಷ ಸೋಹನ್ ಆಳ್ವ ಮಲ್ಲೂರು, ಪಕ್ಷದ ಮುಖಂಡರಾದ ಸೋಹನ್ ಅತಿಕಾರಿ, ಅಮೃತಲಾಲ್ ಡಿಸೋಜ, ಪ್ರಸಾದ್ ಎಡಪದವು, ಭೋಜ ಮೇಂಡ, ಸತೀಶ್ ಕಾವ ಗುರುಪುರ, ರಮೇಶ್ ಶೆಟ್ಟಿ ಕಂದಾವರ, ಶೇಖರ ಸಪಲಿಗ ಪಡುಪೆರಾರ, ಜಾನಪ್ಪ ಗೌಡ ಕೊಂಪದವು, ರೈತ ಮೋರ್ಚಾ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಇದ್ದರು. ಸುಕೇಶ್ ಮಾಣೈ ಸ್ವಾಗತಿಸಿದರು. ಗುರುಪ್ರಸಾದ್ ಪೆರಾರ ನಿರೂಪಿಸಿದರು. ಸುಕುಮಾರ್ ದೇವಾಡಿಗ ವಂದಿಸಿದರು.