ವಿಶೇಷ ಮದ್ಯವರ್ಜನ ಶಿಬಿರದ 58 ಶಿಬಿರಾರ್ಥಿಗಳಿಗೆ ವಾರ್ಗದರ್ಶನ
ಬೆಳ್ತಂಗಡಿ: ವ್ಯಸನಗಳ ಸುಳಿಯಿಂದ ಹೊರಬಂದು ಪರಿಪೂರ್ಣ ಬದುಕನ್ನು ರೂಢಿಸಿಕೊಳ್ಳಲು ಹಂಬಲಿಸುತ್ತಿರುವ ಮನಸ್ಸುಗಳಿಗೆ ಧರ್ಮಸ್ಥಳದ ಮದ್ಯವರ್ಜನ ಶಿಬಿರ ಆಸರೆಯಾಗಿದೆ. ಮದ್ಯವರ್ಜನ ಶಿಬಿರಗಳಲ್ಲಿ ವ್ಯಕ್ತಿಗೆ ಹೊಸ ದಿನಚರಿ, ಯೋಗ, ಧ್ಯಾನ ಮತ್ತು ಧನಾತ್ಮಕ ಚಿಂತನೆಗಳ ಮೂಲಕ ಮನಪರಿವರ್ತನೆ ವಾಡಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ 277ನೇ ವಿಶೇಷ ಮದ್ಯವರ್ಜನ ಶಿಬಿರದ 58 ಶಿಬಿರಾರ್ಥಿಗಳಿಗೆ ವಾರ್ಗದರ್ಶನ ನೀಡಿದರು.
ಮದ್ಯಪಾನವೆಂಬ ಮೃತ್ಯುಕೂಪದಿಂದ ಹೊರಬಂದು ಹೊಸ ಜೀವನವನ್ನು ಆರಂಭಿಸಲು ದೃಢ ಸಂಕಲ್ಪವೇ ಮುಖ್ಯ ಅಸ್ತ್ರ. ಜೀವನದಲ್ಲಿ ಆರೋಗ್ಯವೇ ನಿಜವಾದ ಭಾಗ್ಯ. ದುಶ್ಚಟಗಳಿಂದ ದೂರವಾಗಿ ವಾನಸಿಕ ಪರಿವರ್ತನೆ ಹೊಂದುವ ಮೂಲಕ ಸುಂದರ ಬದುಕು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.