ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಕೋಟ ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಮುಖರಾದ ಪಿ.ಭಾಸ್ಕರ ಹಂದೆ, ಶ್ರೀಪತಿ ಹೇರ್ಳೆ, ಜಗದೀಶ ನಾವಡ ಮತ್ತಿತರರಿದ್ದರು. 
ಉಡುಪಿ

ಸ್ವ ಅಧ್ಯಯನ, ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ

ಇಂದಿರಾ ಎನ್ ಕೆ
ಕೋಟ: ವಿದ್ಯಾರ್ಥಿಗಳು ಜೀವನದಲ್ಲಿ ನಿಖರ ಗುರಿ ಹೊಂದಿರಬೇಕು. ಏಕಾಗ್ರತೆ, ಸ್ವ ಅಧ್ಯಯನ, ನಿರಂತರ ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ. ನಮಗೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವ ಕೌಶಲ ಹೊಂದಿರಬೇಕು ಎಂದು ಸಿ.ಎ. ಅಮರೀಶ ಹೊಳ್ಳ ಹೇಳಿದರು.
ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿದ ಕೋಟ ವಿವೇಕ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಟ ವಿದ್ಯಾ ಸಂ ಅಧ್ಯಕ್ಷ ಪಿ.ಭಾಸ್ಕರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಶ್ರೀಪತಿ ಹೇರ್ಳೆ ಶುಭಾಶಂಸನೆಗೈದರು. ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ 5, 6, 7, 9ನೇ ಸ್ಥಾನ ಪಡೆದ ಸಾತ್ವಿಕಾ ಶ್ರೀಯಾನ್, ಅಪೇಕ್ಷಾ ಪೂಜಾರಿ, ಭೂಮಿಕಾ ಟಿ.ಡಿ., ಶರಣ್ಯಾ ವಾರಂಬಳ್ಳಿ, ಚೈತ್ರಾ ವಿ. ಅವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು.
ಜತೆ ಕಾರ್ಯದರ್ಶಿ ಪಿ.ಮಂಜುನಾಥ ಉಪಾಧ್ಯ, ವಸಂತ ಶೆಟ್ಟಿ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಚೆಂಪಿ ರವಾನಂದ ಭಟ್, ಮುಖ್ಯಶಿಕ್ಷಕರಾದ ವೆಂಕಟೇಶ ಉಡುಪ, ಪ್ರೀತಿರೇಖಾ, ಪ್ರೇವಾನಂದ ಉಪಸ್ಥಿತರಿದ್ದರು. ಜಗದೀಶ ನಾವಡ ಸ್ವಾಗತಿಸಿದರು. ಶೋಭಾ ವಂದಿಸಿದರು. ಅಮಿತ್ ನಿರೂಪಿಸಿದರು.