ಮಜಿ ವೀರಕಂಭ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣೇಶ್ ಶ್ರೀಸಾಯಿ ಅವರನ್ನು ಗೌರವಿಸಲಾಯಿತು. ಅಶೋಕ್ ಕುಮಾರ್ ಪಡ್ಪು, ಡಾ.ತ್ರಿವೇಣಿ ರಮೇಶ್ ಮೊದಲಾದವರಿದ್ದರು.
ಬಂಟ್ವಾಳ: ಪ್ರಕೃತಿ ಮಾನವನ ಜೀವನದ ಅವಿಭಾಜ್ಯ ಅಂಗ. ಗಾಳಿ, ನೀರು, ಮಣ್ಣು, ಸಸ್ಯಗಳು ಮತ್ತು ಪ್ರಾಣಿಗಳು ಸೇರಿ ಪರಿಸರವನ್ನು ರೂಪಿಸುತ್ತವೆ. ಪರಿಸರದ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಹೇಳಿದರು.
ಮಜಿ ವೀರಕಂಭ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವವಾಹಿನಿ ಮಾಣಿ ಘಟಕ ವತಿಯಿಂದ ಶಾಲಾ ಮುಖಮಂಟಪಕ್ಕೆ ಅಳವಡಿಸಿದ ಮೇಲ್ಛಾವಣಿ ಸಮರ್ಪಣೆ ಹಾಗೂ ಯುವ ವೃಕ್ಷೋತ್ಸವ ಕಾರ್ಯಕ್ರಮದಡಿ ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಟ್ಟು ಮಾತನಾಡಿದರು.
ಯುವ ವಾಹಿನಿಯ ಖಜಾಂಚಿ ಡಾ.ತ್ರಿವೇಣಿ ರಮೇಶ್ ಮಾತನಾಡಿದರು. ಶಾಲೆಯ ಬೇಡಿಕೆಯಂತೆ ಶಾಲಾ ಮುಖ ಮಂಟಪಕ್ಕೆ ಮೇಲ್ಛಾವಣಿ ಒದಗಿಸಿದ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಗಣೇಶ್ ಶ್ರೀಸಾಯಿ ಅವರನ್ನು ಗೌರವಿಸಲಾಯಿತು.
ಯುವವಾಹಿನಿ ಮಾಣಿ ಘಟಕದ ಉಪಾಧ್ಯಕ್ಷ ಸುಜಿತ್ ಅಂಚನ್, ಸದಸ್ಯರಾದ ಪ್ರತ್ವೀಕ್, ರೇಣುಕಾ ಕಣಿಯೂರು, ವೀರಕಂಭ ಪಂಚಾಯಿತಿ ನಿಕಟಪೂರ್ವ ಉಪಾಧ್ಯಕ್ಷ ಜನಾರ್ದನ ಪೂಜಾರಿ ಗೋಳಿಮಾರು, ಪ್ರಗತಿಪರ ಕೃಷಿಕ ಜಯಪ್ರಕಾಶ್ ತೆಕ್ಕಿಪಾಪು, ಶಾಲಾ ವಿದ್ಯಾರ್ಥಿ ನಾಯಕ ಮೊಹಮ್ಮದ್ ಹಾರೂನ್ ಫರ್ಹಾನ್ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ ಸ್ವಾಗತಿಸಿದರು. ಶಿಕ್ಷಕ ತೌಸೀಫ್ ಅಹ್ಮದ್ ವಂದಿಸಿದರು. ಶಿಕ್ಷಕಿ ಸಂಗೀತಾ ಶರ್ಮ ಪಿ.ಜಿ. ಕಾರ್ಯಕ್ರಮ ನಿರೂಪಿಸಿದರು.