ಮೂಲ್ಕಿ ವಿಜಯಾ ಕಾಲೇಜಿನಲ್ಲಿ ನಾಯಕತ್ವ ತರಬೇತಿ ಶಿಬಿರವನ್ನು ಮೂಲ್ಕಿ ರೋಟರಿ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಉದ್ಘಾಟಿಸಿದರು. ವಿಜಯಾ ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಶೈಲಜಾ ವೈ.ವಿ., ತುಳು ವರ್ಲ್ಡ್ ೌಂಡೇಶನ್ ಪ್ರಧಾನ ಕಾರ್ಯದರ್ಶಿ ವಸಂತ್ ರೈ ಕುತ್ತೆತ್ತೂರು ಮೊದಲಾದವರಿದ್ದರು.
ಮೂಲ್ಕಿ: ವಿದ್ಯಾರ್ಥಿಗಳಲ್ಲಿ ತುಳುನಾಡಿನ ಸಂಸ್ಕೃತಿ ಸಂಸ್ಕಾರಗಳ ಜತೆಗೆ ಚಿಂತನಾ ಶಕ್ತಿ ಹೆಚ್ಚಿಸುವ ಪ್ರಾಪಂಚಿಕ ಜ್ಞಾನ ಹಾಗೂ ನಾಯಕತ್ವ ಗುಣ ಬೆಳೆಸುವುದು ಅಗತ್ಯ ಎಂದು ಮೂಲ್ಕಿ ರೋಟರಿ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಮಂಗಳವಾರ ಮುಂಬೈ ಎಂ.ಆರ್ ಪೈ ೌಂಡೇಶನ್, ತುಳು ವರ್ಲ್ಡ್ ೌಂಡೇಶನ್, ಮೂಲ್ಕಿ ರೋಟರಿ ಕ್ಲಬ್, ಮೂಲ್ಕಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿಜಯಾ ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಶೈಲಜಾ ವೈ.ವಿ. ಅಧ್ಯಕ್ಷತೆ ವಹಿಸಿದ್ದರು. ತುಳು ವರ್ಲ್ಡ್ ೌಂಡೇಶನ್ ಪ್ರಧಾನ ಕಾರ್ಯದರ್ಶಿ ವಸಂತ್ ರೈ ಕುತ್ತೆತ್ತೂರು., ಎಂ.ಆರ್.ಪೈ ೌಂಡೇಶನ್ ಸಂಸ್ಥೆ ಸಂಪನ್ಮೂಲ ವ್ಯಕ್ತಿಗಳಾದ ಸುಧೀರ್ ಪೈ, ಕ್ಲಾರಿಸ್ಸಾ ಜತನ್ನ, ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ.ವೆಂಕಟೇಶ್ ಭಟ್, ಐಕ್ಯೂಎಸಿ ಸಂಚಾಲಕ ಪ್ರೊ.ದೇವದಾಸ್ ಕೆ., ಕಾಲೇಜಿನ ವಾಣಿಜ್ಯ ಸಂಘದ ಸಂಯೋಜಕಿ ಸೌಮ್ಯಾ ಜೆ.ಪ್ರಭು, ಕಾರ್ಯದರ್ಶಿ ರಾಜರಾಜೇಶ್ವರಿ ಉಪಸ್ಥಿತರಿದ್ದರು. ಭಕ್ಷಿತಾ ನಿರೂಪಿಸಿದರು. ಮಾನ್ವಿತಾ ಸ್ವಾಗತಿಸಿದರು. ಯಶಸ್ವಿ ವಂದಿಸಿದರು.