ಹಾಲಾಡಿ ಹೆಗ್ಗುಂಜೆ ರಾಜೀವ ಶೆಟ್ಟಿ ಸರ್ಕಾರಿ ಪಪೂ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕನ್ನಡ ರಾಜ್ಯೋತ್ಸವ, ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಹಿತಿ ಪೂರ್ಣಿವಾ ಭಟ್ ಕಮಲಶಿಲೆ ವಾತನಾಡಿದರು.
ಹಾಲಾಡಿ: ಗ್ರಾಮೀಣ ಪರಿಸರದ ಆಚರಣೆಗಳ ಹಿನ್ನಲೆ ಮತ್ತು ಮಹತ್ವ ಅರಿತುಕೊಳ್ಳುವ ಮೂಲಕ ಅದನ್ನು ಮುಂದಿನ ತಲೆವಾರಿಗೆ ತಿಳಿಸುವ ಜವಾಬ್ದಾರಿ ನಿಮ್ಮದಾಗಬೇಕು ಎಂದು ಸಾಹಿತಿ ಪೂರ್ಣಿವಾ ಭಟ್ ಕಮಲಶಿಲೆ ಹೇಳಿದರು.
ಹಾಲಾಡಿ ಹೆಗ್ಗುಂಜೆ ರಾಜೀವ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಪಾಲಕರ ಮಹಾಸಭೆ, ವಾರ್ಷಿಕ ಪ್ರತಿಭಾ ಪುರಸ್ಕಾರ ಆಚರಣೆ ಕಾರ್ಯಕ್ರಮದಲ್ಲಿ ವಾತನಾಡಿದರು.
ಹಾಲಾಡಿ ಗ್ರಾಪಂ ಅಧ್ಯಕ್ಷ ಅಶೋಕ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಾಲಾಡಿ ಗ್ರಾಪಂ ಸದಸ್ಯರಾದ ಗುರುಪ್ರಸಾದ್ ಶೆಟ್ಟಿ, ರೇಣುಕಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಂಜುನಾಥ ಕಾಮತ್, ಪಾಲಕರಾದ ಶಂಕರ್ ನಾಯ್ಕ ರಟ್ಟಾಡಿ, ಶಿಲ್ಪಾ ನಾಯಕ್, ಗಾಯತ್ರಿ, ವಿದ್ಯಾಸಂಸ್ಥೆಯ ಕಿರಿಯ ವಿದ್ಯಾರ್ಥಿನಿ ಅಂಜಲಿ, ಪ್ರಾಂಶುಪಾಲ ಬಾಲಕೃಷ್ಣ ಭಟ್ ಕೆ., ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮೇನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಗಣಪತಿ ಹೆಗಡೆ ಸ್ವಾಗತಿಸಿದರು. ವಾಲತಿ ಶೆಟ್ಟಿ ವಂದಿಸಿದರು. ಬಾಲಕೃಷ್ಣ ಭಟ್ ವರದಿ ವಾಚಿಸಿದರು. ಸಮೀಕ್ಷಾ ಮತ್ತು ರಚನಾ ನಿರೂಪಿಸಿದರು.