ಉಡುಪಿ ತಾಲೂಕು ಘಟಕದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಭಾಸ್ಕರಾನಂದ ಕುಮಾರ್​ ದಂಪತಿ ಸನ್ಮಾನಿಸಿ ಆಮಂತ್ರಣ ಪತ್ರಿಕೆಯೊಂದಿಗೆ ವೀಳ್ಯ ನೀಡಿ ಆಹ್ವಾನಿಸಲಾಯಿತು. ಜಯಕರ್​ ಶೆಟ್ಟಿ ಇಂದ್ರಾಳಿ, ರವಿರಾಜ್​ ಎಚ್​.ಪಿ., ಯು.ವಿಶ್ವನಾಥ ಶೆಣೈ, ಪ್ರೊ.ಶಂಕರ್​, ಸಂಧ್ಯಾ ಶೆಣೈ, ಶ್ರೀನಿವಾಸ ಉಪಾಧ್ಯ, ಭುವನಪ್ರಸಾದ್​ ಹೆಗ್ಡೆ, ಗಂಗಾಧರ್​ ಕಿದಿಯೂರು, ರಂಜನಿ ವಸಂತ್​ ಇತರರಿದ್ದರು. 
ಉಡುಪಿ

ಕನ್ನಡ ಸಮ್ಮೇಳನ ಅಧ್ಯಕ್ಷರಿಗೆ ಆಮಂತ್ರಣ

* ಉಡುಪಿ ತಾಲೂಕು 16ನೇ ಸಾಹಿತ್ಯ ಸಮಾರಂಭ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್​ನ ಉಡುಪಿ ತಾಲೂಕು ಘಟಕದ 16ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮೇ 3ರಂದು ಉಡುಪಿಯ ಐವೈಸಿ ಸಭಾಂಗಣದಲ್ಲಿ ನಡೆಯಲಿದ್ದು, ಸರ್ವಾಧ್ಯಕ್ಷರಾದ ಡಾ.ಭಾಸ್ಕರಾನಂದ ಕುಮಾರ್​ ಅವರಿಗೆ ಆಮಂತ್ರಣ ಪತ್ರಿಕೆಯೊಂದಿಗೆ ವೀಳ್ಯ ನೀಡಿ ಮಂಗಳವಾರ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಕಸಾಪ ವತಿಯಿಂದ ಡಾ.ಭಾಸ್ಕರಾನಂದ ಕುಮಾರ್​ ಹಾಗೂ ಪತ್ನಿ ಡಾ. ನಳಿನಿ ಭಾಸ್ಕರಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಯು.ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್​, ಸುಹಾಸಂ ಅಧ್ಯಕ್ಷೆ ಸಂಧ್ಯಾ ಶೆಣೈ, ಶ್ರೀನಿವಾಸ ಉಪಾಧ್ಯ, ಕಲಾಪೋಷಕ ಭುವನಪ್ರಸಾದ್​ ಹೆಗ್ಡೆ, ತುಳುಕೂಟದ ಕಾರ್ಯದರ್ಶಿ ಗಂಗಾಧರ್​ ಕಿದಿಯೂರು, ಪ್ರಭಾಕರ್​ ಭಂಡಾರಿ, ಕಸಾಪ ಉಡುಪಿ ತಾಲೂಕು ಪದಾಧಿಕಾರಿಗಳಾದ ರಂಜನಿ ವಸಂತ್​, ಸತೀಶ್​ ಕೊಡವೂರು, ರಾಜೇಶ್​ ಭಟ್​ ಪಣಿಯಾಡಿ, ಅನಿತಾ ಸಿಕ್ವೇರಾ, ಆರ್​.ವಸಂತ್​, ಶಶಿಕಾಂತ್​ ಶೆಟ್ಟಿ, ದೀಪಾ ಕರ್ಕಿ, ಚಂದ್ರಕಾಂತ್​, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು.
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಜನಾರ್ದನ್​ ಕೊಡವೂರು ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.
"

ದೇಶದ ಪ್ರಸಿದ್ಧ ವೈದ್ಯರಲ್ಲಿ ಒಬ್ಬರಾಗಿರುವ ಡಾ.ಭಾಸ್ಕರಾನಂದ ಕುಮಾರ್​ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವುದು ನಮಗೆಲ್ಲರಿಗೂ ಹೆಮ್ಮೆ. ವೈದ್ಯರಾಗಿ, ಕಲಾವಿದರಾಗಿ ಮತ್ತು ಸಂಘಟಕರಾಗಿ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಅತ್ಯಂತ ಯಶಸ್ವಿಯಾಗಲಿ ನಡೆಯಲಿ.