ತೆಕ್ಕಟ್ಟೆ ದೇವಾಡಿಗರ ಬೆಟ್ಟುವಿನಲ್ಲಿ ಯಶಸ್ವಿ ಕಲಾವೃಂದದ ಕಾರ್ಯಕ್ರಮದಲ್ಲಿ ಹೆರಿಯ ಮಾಸ್ಟರ್ ಹಾಗೂ ಗುಲಾಬಿ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಆಂಡ್ರು ಡಿಸಿಲ್ವಾ, ಗಣಪತಿ ಟಿ.ಶ್ರೀಯಾನ್, ಗುರು ದೇವದಾಸ್ ರಾವ್ ಕೂಡ್ಲಿ, ಶ್ರೀನಿವಾಸ, ಉದ್ಯಮಿ ಗೋಪಾಲ ಪೂಜಾರಿ ಇದ್ದರು.
- ಕಲಾ ಪೋಷಕ ಆಂಡ್ರು ಡಿಸಿಲ್ವಾ ಬಣ್ಣನೆ
- ಯಶಸ್ವಿ ಕಲಾವೃಂದದಿಂದ ಕಾರ್ಯಕ್ರಮ
ಇಪ್ಪತೈದು ವರ್ಷಗಳ ಕಾಲ ಯಶಸ್ವಿ ಕಲಾವೃಂದವನ್ನು ಮುನ್ನಡೆಸುವಲ್ಲಿ ಸಹಕಾರ ನೀಡುತ್ತಾ, ತಮ್ಮ ಕೇಂದ್ರದ ಮಕ್ಕಳಿಗೆ ಒಂದು ಅವಕಾಶವಾಗಲಿ ಎಂಬ ಕಾಳಜಿಯಿಂದ ಸಂಸ್ಥೆಗಳ ವಿವಿಧ ಪ್ರಕಾರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಮನಸ್ಸು ಹೆರಿಯ ಮಾಸ್ಟರ್ ಅವರದ್ದು. ತನ್ನ ದುಡಿಮೆಯ ಒಂದು ಪಾಲನ್ನು ಇಂತಹ ಕಾರ್ಯಕ್ರಮಗಳಿಗೆ ವಿನಿಯೋಗಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದು ಕಲಾ ಪೋಷಕ ಆಂಡ್ರು ಡಿಸಿಲ್ವಾ ಹೇಳಿದರು.
ತೆಕ್ಕಟ್ಟೆ ದೇವಾಡಿಗರ ಬೆಟ್ಟುವಿನಲ್ಲಿ ಇತ್ತೀಚೆಗೆ ಯಶಸ್ವಿ ಕಲಾವೃಂದದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಣ್ಯರಿಗೆ ಗೌರವಾರ್ಪಣೆ
ಹೆರಿಯ ಮಾಸ್ಟರ್ ಹಾಗೂ ಗುಲಾಬಿ ಅವರನ್ನು ಗೌರವಿಸಲಾಯಿತು. ಜಿಪಂ ಮಾಜಿ ಸದಸ್ಯ ಗಣಪತಿ ಟಿ.ಶ್ರೀಯಾನ್, ಗುರು ದೇವದಾಸ್ ರಾವ್ ಕೂಡ್ಲಿ, ಶ್ರೀನಿವಾಸ, ಉದ್ಯಮಿ ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಪ್ರಣಮ್ಯ, ಮನೀಶ್ ಉಪಸ್ಥಿತರಿದ್ದರು.
ಸುಧನ್ವಾರ್ಜುನ ರಂಗ ಪ್ರಸ್ತುತಿ
ಬಳಿಕ ಸಂಗೀತ ಸಂಜೆ, ಯಕ್ಷಗಾನ ವೈಭವ, ಯಕ್ಷಗಾನ ಸುಧನ್ವಾರ್ಜುನ ರಂಗ ಪ್ರಸ್ತುತಿಗೊಂಡಿತು.