ಮೂಳೂರು- ಅಡ್ಡೂರು ಜೋಡುಕರೆ ಕಂಬಳವನ್ನು ಕಟೀಲಿನ ಆನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಉದ್ಘಾಟಿಸಿದರು. ಪ್ರಮುಖರಾದ ಅಜಿತ್ ಕುವಾರ್ ರೈ ವಾಲಾಡಿ, ವರ್ಧವಾನ ದುರ್ಗಾಪ್ರಸಾದ ಶೆಟ್ಟಿ, ಇನಾಯತ್ ಅಲಿ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಗುರುಪುರ
ಕಂಬಳವು ಜಾನಪದ ಕ್ರೀಡೆಯಾಗಿದ್ದರೂ, ಸವಾಜದ ಏಳಿಗೆ ಬಯಸಿ ದೇವರ ಆರಾಧನೆಯೊಂದಿಗೆ ನಡೆಯುವ ಆಚರಣೆೆ. ಇಲ್ಲಿ ಪರಸ್ಪರ ಬಾಂಧವ್ಯವಿದೆ. ಗುರುಪುರ ಕಂಬಳದಲ್ಲಿ ತುಳುನಾಡು ಮತ್ತು ಭಾರತೀಯ ಪರಂಪರೆ ಎದ್ದು ಕಾಣುತ್ತಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.
ಗುರುಪುರ ವಾಣಿಬೆಟ್ಟುಗುತ್ತು ಮೂಳೂರು- ಅಡ್ಡೂರು ಜೋಡುಕರೆ ಕಂಬಳ ಸಮಿತಿ ಶನಿವಾರ ಆಯೋಜಿಸಲಾದ 3ನೇ ವರ್ಷದ ಹೊನಲು ಬೆಳಕಿನ ಮೂಳೂರು- ಅಡ್ಡೂರು ಜೋಡುಕರೆ ‘ಗುರುಪುರ ಕಂಬಳ’ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಂಗಳೂರು ಬಂಟರ ಯಾನೆ ನಾಡವರ ವಾತೃ ಸಂದ ಅಧ್ಯಕ್ಷ ಅಜಿತ್ ಕುವಾರ್ ರೈ ವಾಲಾಡಿ ಅಧ್ಯಕ್ಷತೆ ವಹಿಸಿದ್ದರು.
ಗುರುಪುರ ಗೋಳಿದಡಿಗುತ್ತಿನ ಗಡಿಕಾರ ವರ್ಧವಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿದರು.
ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ, ಸಮಿತಿ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಯಶವಂತ ಶೆಟ್ಟಿ ಬೆಳ್ಳೂರುಗುತ್ತು, ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ವಾಣಿಬೆಟ್ಟುಗುತ್ತು, ವ್ಯವಸ್ಥಾಪಕ ವಿನಯ ಕುವಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ, ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ, ಸಮಿತಿ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ದೋಣಿಂಜೆಗುತ್ತು ಗಡಿಕಾರ ಪ್ರಮೋದ್ ಕುವಾರ್ ರೈ, ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪಾಂಡುರಂಗ ಕಾಮತ್, ದೈವಂಗಳಗುಡ್ಡೆ ಶ್ರೀ ನೀಲಕಂಠ ಉವಾಮಹೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಸಮಿತಿ ಪದಾಧಿಕಾರಿಗಳಾದ ಹರೀಶ್ ಭಂಡಾರಿ ಗುರುಪುರ, ಪುರುಷೋತ್ತಮ ಮಲ್ಲಿ, ಸುರೇಂದ್ರ ಕಂಬಳಿ, ಗಿರೀಶ್ ಆಳ್ವ, ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು, ಮುಂಬೈ ಸಮಿತಿಯ ಸತೀಶ್ ಚೌಟ, ಸತೀಶ್ ಎಂ.ಶೆಟ್ಟಿ ಕಾರಮೊಗರುಗುತ್ತು, ನಾಸಿರ್ ಲಕ್ಕೀಸ್ಟಾರ್, ಚಂದ್ರಹಾಸ ಅಮೀನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಶಶಿರಾಜ್ ಶೆಟ್ಟಿ ಕೊಳಂಬೆ, ಆರ್.ಕೆ.ಪೃಥ್ವೀರಾಜ್, ಉಮೇಶ್ ರೈ ಪದವು ಮೇಗಿನಮನೆ, ಸುಧೀರ್ ಪಕ್ಕಳ, ಜಯಂತ್ ಅಮೀನ್ ಕೋರೆಟ್ಟು, ಜತ್ತಿ ಪೂಜಾರಿ ಮೂಡುಶೆಡ್ಡೆ, ಚಂದ್ರಹಾಸ ಪೂಜಾರಿ ಕೌಡೂರು, ತನಿಯಪ್ಪ ಪೂಜಾರಿ ಮೊದಲಾದವರಿದ್ದರು.
ವಿಜೇತ್ ಶೆಟ್ಟಿ ಮಂಜನಾಡಿ ಮತ್ತು ಮನೋಜ್ ವಾಮಂಜೂರು ನಿರೂಪಿಸಿದರು. ಕಂಬಳ ಸಮಿತಿ ಸ್ಥಾಪಕಾಧ್ಯಕ್ಷ ರಾಜಕುವಾರ್ ಶೆಟ್ಟಿ ತಿರುವೈಲುಗುತ್ತು ಸ್ವಾಗತಿಸಿದರು. ಕಂಬಳದಲ್ಲಿ ಹಾಜರಿದ್ದ ಪ್ರತಿಯೊಂದು ಜೋಡಿ ಕೋಣಗಳಿಗೆ 30 ಕೆ.ಜಿ. ಉರುಳಿ ಬ್ಯಾಗ್, ಬೆಳ್ಳಿ ಪದಕ, ಶಾಲುಕೊಟ್ಟು ಗೌರವಿಸಲಾಯಿತು.
ಗುರುಪುರ ಕಂಬಳವು ವ್ಯವಸ್ಥಿತ, ಸಾಂಪ್ರದಾಯಿಕ ಹಾಗೂ ಅದ್ದೂರಿಯಾಗಿ ನಡೆಯುವಲ್ಲಿ ಇನಾಯತ್ ಅಲಿ ಅವರ ಶ್ರಮವಿದೆ. ತುಳುನಾಡಿನ ಕೂಡುಕಟ್ಟಿಗೆ ಸಾಕ್ಷಿಯಾದ ಕಂಬಳ ಕ್ರೀಡೆಯು ಗುರುಪುರದಲ್ಲಿ ಅತಿ ವಿಶಿಷ್ಟ ಹಾಗೂ ಜಾತ್ಯತೀತ ನೆಲೆಯಲ್ಲಿ ನಡೆಯುತ್ತಿದೆ.
ಅಜಿತ್ ಕುವಾರ್ ರೈ ಮಾಲಾಡಿ ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂದ ಅಧ್ಯಕ್ಷ
ಕಂಬಳ ಜಾನಪದ ಕ್ರೀಡೆಯಾಗಿದ್ದರೂ ಇದರಲ್ಲಿ ಸವಾಜಕ್ಕೆ ನೆರವಾಗುವ ವ್ಯವಸ್ಥೆ ಅಡಕವಾಗಿದೆ. ಕಂಬಳದಿಂದ ಸುತ್ತಮುತ್ತಲಿನ ಮಂದಿ ಒಗ್ಗೂಡಲು ಸಾಧ್ಯವಿದೆ. ಸವಾಜದ ಉನ್ನತಿಗಾಗಿ ಇಂತಹ ಕ್ರೀಡೆಗಳು ಇರಬೇಕು.