ಪರ್ಯಾಯ ಶೀರೂರು ಮಠದ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ದೀಪ ಪ್ರಜ್ವಲನೆ ನೆರವೇರಿಸಿದರು.
ಉಡುಪಿ: ಶ್ರೀಕೃಷ್ಣಮಠ, ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ವಿಜಯವಾಣಿ ಕನ್ನಡ ದಿನಪತ್ರಿಕೆ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಶ್ರೀ ಕೃಷ್ಣಯೋಗ ಕೇಂದ್ರ, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ, ನಿರಂತರ ಯೋಗ ಕೇಂದ್ರ ಹಾಗೂ ಎಲ್.ಐ.ಸಿ. ಆಫ್ ಇಂಡಿಯಾ ಸಹಯೋಗದಲ್ಲಿ ಹರಿದ್ವಾರ ಪತಂಜಲಿ ಯೋಗ ಪೀಠ ವತಿಯಿಂದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಭಾನುವಾರ ರಾಜಾಂಗಣದಲ್ಲಿ ನಡೆಯಿತು.
ಪರ್ಯಾಯ ಶೀರೂರು ಮಠದ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ದೀಪ ಪ್ರಜ್ವಲನೆ ನೆರವೇರಿಸಿದರು. ಪರ್ಯಾಯ ಮಠದ ದಿವಾನ್ ಡಾ. ಉದಯ್ ಕುಮಾರ್ ಸರಳತ್ತಾಯ, ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್, ಮಹಿಳಾ ಪ್ರಭಾರಿ ಲೀಲಾ ಆರ್. ಅಮೀನ್, ಯುವ ಪ್ರಭಾರಿ ಜಗದೀಶ ಕುಮಾರ್, ಕೋಶಾಧಿಕಾರಿ ಶ್ರೀಪತಿ ಭಟ್, ಗಿರೀಶ ಉದ್ಯಾವರ, ರವೀಂದ್ರ, ನಿತಿನ್ , ರಾಜು ನಂಬಿಯಾರ್, ಶ್ರೀ ಪತಂಜಲಿ ಸಂಸ್ಥೆಯ ಸರೋಜಮ್ಮ, ಶ್ರೀಕೃಷ್ಣಯೋಗ ಕೇಂದ್ರದ ಅಮಿತ್ ಕುಮಾರ್ ಶೆಟ್ಟಿ, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಪಿ. ವಿ. ಭಟ್, ರಾಜೇಶ್ ಕುಮಾರ್ ಶೆಟ್ಟಿ ಬನ್ನಂಜೆ, ಎಲ್ಐಸಿ ಸಂಸ್ಥೆಯ ಚಂದ್ರಿಕಾ ಪೈ, ವಿಜಯವಾಣಿ ಹಿರಿಯ ವರದಿಗಾರ ಗೋಪಾಲಕೃಷ್ಣ ಪಾದೂರ್ ಉಪಸ್ಥಿತರಿದ್ದರು.
ಪತಂಜಲಿ ಯೋಗ ಸಮಿತಿಯ ಲಕ್ಷ$್ಮಣ್ ಕೆ., ರೋಹಿತ್ ಮತ್ತು ಶಿಲ್ಪಾ, ಶ್ರೀ ಪತಂಜಲಿ ಸಂಸ್ಥೆಯ ಉಮೇಶ್ ಮರಣೆ ಹಾಗೂ ರಶ್ಮಿ, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ದೇವೇಂದ್ರ, ನಿರಂತರ ಯೋಗ ವಿಜ್ಞಾನ ಕೇಂದ್ರದ ಸುಜಾತಾ ಆಚಾರ್ಯ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಚಿಟ್ಪಾಡಿ ನಿರಂತರ ಯೋಗ ವಿಜ್ಞಾನ ಕೇಂದ್ರದ ಮಮತಾ ಶೆಟ್ಟಿಗಾರ್ ಯೋಗಾಸನಗಳ ಬಗ್ಗೆ ವಿವರಿಸಿದರು. ರಂಜಿತ್ ಕೆ. ಎಸ್. ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ 5.30ರಿಂದ 7.30ರವರೆಗೆ ನಡೆದ ಯೋಗ ದಿನಾಚರಣೆಯಲ್ಲಿ 300ಕ್ಕೂ ಅಧಿಕ ಮಂದಿ 15ಕ್ಕೂ ಹೆಚ್ಚಿನ ಯೋಗಾಸನಗಳನ್ನು ಪ್ರದರ್ಶಿಸಿದರು.
"
ಶರೀರ ಮಾಧ್ಯಮಂ ಖಲು ಧರ್ಮ ಸಾಧನಂ ಎಂಬ ಕಾಳಿದಾಸನ ಮಾತಿನಂತೆ ಧರ್ಮಸಾಧನೆಗೆ ಶರೀರವನ್ನು ಸುಸ್ಥಿಯಲ್ಲಿ ಇಟ್ಟುಕೊಳ್ಳುವುದು ಅತಿ ಅಗತ್ಯ. ಯೋಗಾಭ್ಯಾಸ ಇದಕ್ಕೆ ಪೂರಕವಾಗಿದೆ. ದತ್ತಾತ್ರೇಯ ಭಗವಂತ ಯೋಗಶಾಸ್ತ್ರವನ್ನು ಪ್ರಾರಂಭಿಸಿದ್ದಾರೆಂದು ಭಾಗವತ ಹೇಳುತ್ತದೆ. ಪತಂಜಲಿ ಋಷಿ ಇದನ್ನು ಮುಂದುವರಿಸಿದ್ದಾರೆ. ಯೋಗದಲ್ಲಿ ದೈಹಿಕ ಸಾಧನೆ ಮಾತ್ರವಲ್ಲದೆ ಅಷ್ಟಾಂಗ ಯೋಗದ ಮೂಲಕ ಯೋಗೇಶ್ವರ ಕೃಷ್ಣನನ್ನು ಒಲಿಸಿಕೊಳ್ಳಬೇಕು.
— ಡಾ.ಉದಯಕುಮಾರ್ ಸರಳತ್ತಾಯ, ದಿವಾನ್, ಶೀರೂರು ಮಠ.