ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಇಂಟರ್ಯಾಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭವನ್ನು ಕೆ. ಅಣ್ಣಪ್ಪ ಶೆಣೈ ಉದ್ಘಾಟಿಸಿದರು. ಡಾ.ಆಶ್ವಿನ್ಕುಮಾರ್, ಶಶಿರಾಜ್ ಕುಂದರ್, ವಿದ್ಯಾ ಅಮರ್ ಪೈ, ಕೆ. ವಿನಾಯಕ್ ಕಿಣಿ, ರೇಶ್ಮಾ ಪ್ರಭು, ಸಮರ್ಥರಾಜ್, ರೇಣುಕಾ ಕೆ. ಇದ್ದರು.
* ಉಡುಪಿ ರೋಟರಿ ಅಧ್ಯಕ್ಷ ರೊ. ಗೋಪಾಲಕೃಷ್ಣ ಪ್ರಭು ಅನಿಸಿಕೆ
* ಇಂದ್ರಾಳಿ ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ
ಉಡುಪಿ: ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವಲ್ಲಿ ವಿದ್ಯಾರ್ಥಿಗಳ ಪಾತ್ರವೂ ಸಹ ಪ್ರಮುಖ ಆಗಿರುತ್ತದೆ. ದುರ್ವ್ಯಸನಗಳಿಂದ ದೂರವಿದ್ದು, ಓದಿನತ್ತ ಮಾತ್ರ ಗಮನ ಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಕಲಿಕೆಯೊಂದಿಗೇ ನಾಯಕತ್ವದ ಗುಣವನ್ನೂ ಬೆಳೆಸಿಕೊಳ್ಳಬೇಕು ಎಂದು ಉಡುಪಿ ರೋಟರಿ ಅಧ್ಯಕ್ಷ ರೊ. ಗೋಪಾಲಕೃಷ್ಣ ಪ್ರಭು ಸಲಹೆ ನೀಡಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ (ಜು.3) ಆಯೋಜಿಸಿದ್ದ ಇಂಟರ್ಯಾಕ್ಟ್ ಕ್ಲಬ್ನ 2026-27ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಉತ್ತಮ ಪ್ರಜೆಗಳಾಗಿ
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೆಎಂಸಿಯ ಡಾ.ಆಶ್ವಿನ್ಕುಮಾರ್ ಮಾತನಾಡಿ, ಉತ್ತಮ ಸ್ನೇಹಿತರ ಸಹವಾಸದೊಂದಿಗೆ ಆರೋಗ್ಯಪೂರ್ಣ ಜೀವನ ನಡೆಸಬೇಕು. ದೇಶದ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ತಿಳಿಸಿ, ಮಾದಕ ವ್ಯಸನಗಳಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿರಿ ನೀಡಿದರು.
ಶಾಲಾ ಸಂಚಾಲಕ ಕೆ. ಅಣ್ಣಪ್ಪ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.
ಉಡುಪಿ ಇಂಟರ್ಯಾಕ್ಟ್ ಚೇರ್ಮನ್ ಶುಭಲಕ್ಷಿ$್ಮ ಎಸ್.ಬಿ., ಶಾಲಾ ಆಡೆಳಿತ ಮಂಡಳಿಯ ಸದಸ್ಯೆ ವಿದ್ಯಾ ಅಮರ್ ಪೈ, ಶಿಕ್ಷಕ&ರಕ್ಷಕ ಸಂಘಾದ ಅಧ್ಯಕ್ಷ ಶಶಿರಾಜ್ ಕುಂದರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು, ಇಂಟರ್ಯಾಕ್ಟ್ ಕ್ಲಬ್ ಶಾಲಾ ಸಂಯೋಜಕಿ ರೇಣುಕಾ ಕೆ., ರೋಟರಿ ಸದಸ್ಯರು, ಕ್ಲಬ್ನ ನಿರ್ಗಮಿತ ಅಧ್ಯಕ್ಷ ಅನುಜ್ ಕಿಣಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶೃತಿ, ರೀಮಾ, ಕೀರ್ತನಾ, ಶ್ರೀಮಯಿ ಪ್ರಾರ್ಥಿಸಿದರು. ಕ್ಲಬ್ ನೂತನ ಅಧ್ಯಕ್ಷ ಸಮರ್ಥರಾಜ್ ಸ್ವಾಗತಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ. ವಿನಾಯಕ್ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ರೀಮಾ ರಾವ್ ಸದಸ್ಯರನ್ನು ಪರಿಚಯಿಸಿದರು. ಸಂಜನಾ ಹೆಬ್ಬಾರ್ ವರದಿ ವಾಚಿಸಿದರು. ಆದ್ಯಾ ಕಾಮತ್ ವಂದಿಸಿದರು. ಶ್ರೀಪ್ರದಾ ಕಾರ್ಯಕ್ರಮ ನಿರೂಪಿಸಿದರು.