ಉಡುಪಿಯ ಮಣಿಪಾಲದಲ್ಲಿರುವ ಕಸ್ತೂರ್ಬಾ ಆಸ್ಪತ್ರೆ.
* ಜ.6ರಂದು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆಯೋಜನೆ
ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಇಂಟಿಗ್ರೇಟೆಡ್ ಲಿವರ್-ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ ಸೇವೆ ಒದಗಿಸಲು ಸಜ್ಜಾಗಿದ್ದು, ಇದು ಈ ಪ್ರದೇಶದ ರೋಗಿಗಳಿಗೆ ಸುಧಾರಿತ ಚಿಕಿತ್ಸಾ ವಿಧಾನದಲ್ಲಿ ಲಿವರ್ (ಯಕೃತ್)ನ ಆರೈಕೆಗೆ ಮೀಸಲಿರಲಿದೆ. ಈ ಸೌಲಭ್ಯವು ಜ.6ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಭ್ಯವಿರಲಿದೆ.
ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆ ಮಾರ್ಗದಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್ಪ್ಲಾಂಟ್ ಸರ್ಜನ್ ಆಗಿರುವ ಡಾ. ಜಯಂತ್ ರೆಡ್ಡಿ ಮತ್ತು ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಡಾ. ಶ್ರುತಿ ಎಚ್.ಎಸ್. ರೆಡ್ಡಿ ಹಾಗೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೊಎಂಟರಾಲಜಿ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ಡಾ. ಗಣೇಶ್ ಭಟ್, ಪ್ರಾಧ್ಯಾಪಕ ಡಾ. ಶಿರಣ್ ಶೆಟ್ಟಿ ನೇತೃತ್ವದಲ್ಲಿ ಈ ಕ್ಲಿನಿಕ್ ನಡೆಯಲಿದೆ.
ಈ ಕ್ಲಿನಿಕ್ನಲ್ಲಿ ಕೊಬ್ಬಿನ ಯಕೃತ್ ಕಾಯಿಲೆ, ದೀರ್ಘಕಾಲದ ಲಿವರ್ ಸಮಸ್ಯೆ, ಲಿವರ್ ಸಿರೋಸಿಸ್, ಕಾಮಾಲೆ, ಅಸ್ಸೈಟ್ಸ್, ಲಿವರ್ ಗಡ್ಡೆಗಳು ಅಥವಾ ಕ್ಯಾನ್ಸರ್, ಲಿವರ್ ವೈಫಲ್ಯದ ತೊಡಕುಗಳು, ಲಿವರ್ ಕಸಿ ಮೌಲ್ಯಮಾಪನಕ್ಕೆ ಸಲಹೆ ಪಡೆದವರು, ಲಿವರ್ ಅಸ್ವಸ್ಥತೆಗಳಿರುವ ಮಕ್ಕಳು, ಲಿವರ್ ಚಿಕಿತ್ಸೆಯ ನಂತರ ಅಥವಾ ಕಸಿ ನಂತರ ಮೇಲ್ವಿಚಾರಣೆ ಅಗತ್ಯವಿರುವ ರೋಗಿಗಳು ಪ್ರಯೋಜನ ಪಡೆಬಹುದಾಗಿದೆ.
ನೋಂದಣಿ ಕಡ್ಡಾಯ
ಕ್ಲಿನಿಕ್ಗೆ ಬರುವ ರೋಗಿಗಳು ಕಡ್ಡಾಯವಾಗಿ ಮೊದಲೇ ಹೆಸರು ನೋಂದಾಯಿಸಬೇಕಿದೆ. ವಿಚಾರಣೆಗಾಗಿ ಮೊ.ಸಂ. 6364469750 ಕರೆ ಮಾಡಬಹುದು. ಅಥವಾ www.khmanipal.comಗೆ ಭೇಟಿ ನೀಡುವಂತೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಕರಾವಳಿ ಕರ್ನಾಟಕ, ಉಡುಪಿ, ದಕ್ಷಿಣ ಕನ್ನಡ ಮತ್ತು ನೆರೆಯ ಜಿಲ್ಲೆಗಳಲ್ಲಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಈ ಕ್ಲಿನಿಕ್ ವಿಶೇಷ ಆರೈಕೆ ಒದಗಿಸಲಿದೆ. ಆರಂಭಿಕ ರೋಗನಿರ್ಣಯ, ಸಕಾಲಿಕ ಚಿಕಿತ್ಸೆ ಮತ್ತು ತಡೆರಹಿತ ದೀರ್ಘಕಾಲೀನ ಆರೈಕೆ ಬೆಂಬಲಿಸುವ ಗುರಿ ಹೊಂದಿದೆ. ಮೊದಲ ಬಾರಿಗೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಿವರ್ ಕಸಿ ಮೌಲ್ಯಮಾಪನ, ಚಿಕಿತ್ಸಾ ಯೋಜನೆ ಮತ್ತು ರಚನಾತ್ಮಕ ಅನುಸರಣೆ ಸೇರಿದಂತೆ ಲಿವರ್ ಕಸಿ ಸಂಬಂಧಿಸಿ ಸಮಗ್ರ ಸೇವೆ ಲಭ್ಯವಾಗುತ್ತಿದೆ.